ಮಾಡಾಳ್​ ಪ್ರಕರಣದ ತನಿಖಾಧಿಕಾರಿಗಳು ಚೇಂಜ್

ಮಂಗಳವಾರ, 7 ಮಾರ್ಚ್ 2023 (15:46 IST)
ಪುತ್ರನ ಲಂಚ ಪ್ರಕರಣದಲ್ಲಿ A1 ಆರೋಪಿಯಾಗಿರುವ KSDL ಮಾಜಿ ಚೇರ್ಮನ್ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ ಆರು ದಿನಗಳಿಂದ ಕೈಗೆ ಸಿಗದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಬಂಧನಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಇನ್ನು ಈ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತನಿಖಾಧಿಕಾರಿಗಳ ಬದಲಾವಣೆಯಾಗಿದೆ. ಕೇವಲ 4 ದಿನಕ್ಕೆ ಪ್ರಕರಣದ ಇಬ್ಬರು ತನಿಖಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದ್ದು, ಆದೇಶ ಹೊರಡಿಸಿದ್ಧಾರೆ. ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಬದಲಾವಣೆ ಮಾಡಲು ಆದೇಶಿಸಿದ್ಧಾರೆ. ಇನ್ಸ್‌ಪೆಕ್ಟರ್ ಪ್ರಮೋದ್ ಹಾಗೂ DySP ಅಂಥೋಣಿ ಜಾನ್​ರನ್ನು ನೇಮಕ ಮಾಡಿದ್ದಾರೆ. ಟ್ರ್ಯಾಪ್ ಮಾಡಿದ ಅಧಿಕಾರಿ ತನಿಖಾಧಿಕಾರಿಯಾಗಿ ಮುಂದುವರೆಯೋ ಹಾಗಿಲ್ಲ. ಹೀಗಾಗಿ ಲೋಕಾಯುಕ್ತ ತನಿಖಾಧಿಕಾರಿಗಳನ್ನ ಬದಲಾವಣೆ ಮಾಡಿದೆ. ಲೋಕಾಯುಕ್ತ ನಿಯಮಾನುಸಾರ ತನಿಖಾಧಿಕಾರಿ ಬದಲಾವಣೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ