ಮೋದಿ ಎಂಟ್ರಿಯಿಂದ ಬಿಜೆಪಿ ಹವಾ ಹೆಚ್ಚಿದೆ

ಸೋಮವಾರ, 1 ಮೇ 2023 (15:20 IST)
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಟ್ರಿಯಿಂದ ಬಿಜೆಪಿ ಹವಾ ಹೆಚ್ಚಿದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಎಲ್ಲೆಡೆ ಬಿಜೆಪಿ ಅಲೆ ಇದೆ.
 
ಬಿಜೆಪಿಯಿಂದ ಕರ್ನಾಟಕ ಸರ್ಕಾರದ ವಿಕಾಸ ಆಗಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಸಿಗಲಿದೆ.. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ವೇಗವಾಗಲಿದೆ.. ಬಾಗಲಕೋಟೆ ಜಿಲ್ಲೆಗೆ ಮೇ 7 ರಂದು ಪ್ರಧಾನಿ ಮೋದಿ ಬರಲಿದ್ದಾರೆ.
ಬಾದಾಮಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಪ್ರಚಾರ ಮಾಡಲಿದ್ದಾರೆ ಎಂದರು.. ಇನ್ನು ರಾಜ್ಯದಲ್ಲಿ ಮೋದಿ ಎಂಟ್ರಿಯಿಂದ ಬಿಜೆಪಿ ಹವಾ ಹೆಚ್ಚಿದೆ. ಪ್ರಧಾನ ಮಂತ್ರಿಗಳು ಹೋದ ಕಡೆಗೆಲ್ಲಾ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳ್ಳುತ್ತಿದೆ.. ಬಿಜೆಪಿ ಕಾರ್ಯಕರ್ತರ ಇಮೇಜ್ ಸಹ ಹೆಚ್ಚುತ್ತಿದೆ.. ಹೀಗಾಗಿ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಹೆಚ್ಚು ಸ್ಥಾನ ಪಡೆಯುವ ವಿಶ್ವಾಸ ಬರ್ತಿದೆ. ಈ ಬಾರಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ