‘ಸಿಎಂ ಸಿದ್ದರಾಮಯ್ಯ ಕಿಕ್ ಬ್ಯಾಕ್ ರಾಜಕಾರಣಿ’
ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿದ ವಿಶ್ವನಾಥ್ ಸಿಎಂ ವಿರುದ್ಧ ಏಕವಚನದ ಪ್ರಯೋಗ ನಡೆಸಿದ್ದಾರೆ. ಕುರುಬ ಸಮಾಜಕ್ಕೆ ತಾನೊಬ್ಬನೇ ನಾಯಕ ಎಂದು ಮೆರೆಯುತ್ತಿರುವ ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲಿ ಕುರುಬ ಸಮುದಾಯದವರೇ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿರುವ ವಿಶ್ವನಾಥ್, ಸಿಎಂ ಸಿದ್ದರಾಮಯ್ಯ ತಮಗೆ ಉಪಕಾರ ಮಾಡಿದವರನ್ನು ಸ್ಮರಿಸುವ ಗುಣವಿಲ್ಲದವರು ಎಂದು ವಾಗ್ದಾಳಿ ನಡೆಸಿದ್ದಾರೆ.