ಕುಕ್ಕೇ ಸುಬ್ಯಹ್ಮಣ್ಯ......

ಶನಿವಾರ, 22 ನವೆಂಬರ್ 2014 (13:57 IST)
ಕರ್ನಾಟಕದಲ್ಲಿ ಹಲವಾರು ಸುಬ್ರಹ್ಮಣ್ಯ ದೇವಾಲಯಗಳಿವೆ. ಇವೆಲ್ಲವುಗಳಿಗಿಂತ ಕುಕ್ಕೇ ಸುಬ್ರಹ್ಮಣ್ಯ ದೇವಾಲಯ ಹೆಚ್ಚು ಖ್ಯಾತಿ. ಸುಳ್ಯ ತಾಲೋಕಿನಲ್ಲಿರು ತೀರ್ಥ ಕ್ಷೇತ್ರ ಇದು. ಸಹ್ಯಾದ್ರಿಯ ಮಡಲಲ್ಲಿರುವ ಧಾರ್ಮಿಕ ಸ್ಥಳ ಬೆಟ್ಟಗುಡ್ಡಗಳು ಹಾಗೂ ಹಸಿರು ಸಸ್ಯ ಕಾಶಿಯ ನಡುವೆ ಬೆಳಗುತ್ತಿದೆ. ನಾಗರದೋಷ ನಿವಾರಣೆಗೆ ಹೆಸರಾಂತ ಚಲನ ಚಿತ್ರ ಕಲಾವಿದರು, ಕ್ರಿಕೆಟ್ ತಾರೆಗಳು, ರಾಜಕಾರಣಿಗಳು ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಲ್ಲಿಗೆ ಭೇಟಿ ನೀಡಿದ್ದರು. ಆ ನಂತರ ಭಕ್ತರ ಸಂಖ್ಯೆ ಹೆಚ್ಚಾಗತೊಡಗಿದೆ. ಪ್ರತಿ ದಿನ ಸಾವಿರಾರು ಮಂದಿ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. 
 
ಶಾಸನದಲ್ಲಿ ಇದಕ್ಕೆ ಕುಕ್ಕೆ ಎಂದು ಹೆಸರಿತ್ತು ಎನ್ನಲಾಗಿದೆ. ಸ್ಕಾಂದ ಪುರಾಣದಲ್ಲಿ ಇದರ ಪ್ರಸ್ತಾಪವಿದೆ. ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದರೆನ್ನಲು ಹಲವಾರು ದಾಖಲೆಗಳಿವೆ.
 
ದೇವಾಲಯದ ಪ್ರಾಕಾರದೊಳಗೆ ಸುಬ್ರಹ್ಮಣ್ಯ ಲಕ್ಷ್ಮೀನರಸಿಂಹ ಮತ್ತು ಉಮಾ ಮಹೇಶ್ವರ ದೇವಾಲಯಗಳಿವೆ. ಶಂಕರ ಮಠವೂ ಇಲ್ಲಿದೆ. ಲಕ್ಷ್ಮೀ ನರಸಿಂಹ ವರ್ಷಕ್ಕೊಮ್ಮೆ ಜಾತ್ರೆ ನಡೆಯುವ ಸುಬ್ರಹ್ಮಣ್ಯ ಪುತ್ತೂರಿನಿಂದ 33 ಕಿ.ಮೀ ದೂರದಲ್ಲಿದೆ. ಇದರ ಸಮೀಪವೇ ಕುಮಾರಧಾರಾ ನದಿ ಹರಿಯುತ್ತಿದೆ.

ವೆಬ್ದುನಿಯಾವನ್ನು ಓದಿ