ಲಿಂಗಾಯತ ವೀರಶೈವ ಧರ್ಮ ವಿಭಜನೆ ರಾಜಕೀಯ ಲಾಭಕ್ಕೆ ಎಂದ ಸಂಸದ

ಮಂಗಳವಾರ, 16 ಏಪ್ರಿಲ್ 2019 (15:07 IST)
ಲಿಂಗಾಯತ ವೀರಶೈವ ಧರ್ಮ ವಿಭಜನೆ ವಿಷಯ ರಾಜಕೀಯ ಲಾಭಕ್ಕಾಗಿ ಅನ್ನೋದು ಬಯಲಾಗಿದೆ. ಜನತೆಗೆ ಒಳಿತು ಮಾಡುವ ಉದ್ದೇಶದಿಂದ ಧರ್ಮ ಹೋರಾಟ ರೂಪಿಸಿದ್ದು ಅಲ್ಲ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಂತ ಬಿಜೆಪಿ ಸಂಸದ ದೂರಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಜೆಪಿಯ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದು, ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಎಂತಹ ಕೀಳುಮಟ್ಟದ ರಾಜಕೀಯ ಮಾಡಲು ಹಿಂಜರಿಯುವುದಿಲ್ಲ. ಹಿಂದೂ ಭಯೋತ್ಪಾದಕ ಶಬ್ದ ಹುಟ್ಟುಹಾಕಿದ್ದೆ ಕಾಂಗ್ರೆಸ್. ಯುಪಿಎ ಎರಡನೇಯ ಅವಧಿಯಲ್ಲಿ ಭಯೋತ್ಪಾದನೆ ತುತ್ತ ತುದಿಗೆ ತಲುಪಿತ್ತು. ಭಯೋತ್ಪಾದಕ ದಾಳಿ ನಡೆದಾಗಲೆಲ್ಲಾ ಹಿಂದೂ ಸಂಘಟನೆಗಳನ್ನು, ಆರ್.ಎಸ್.ಎಸ್ ಹೆಸರು ಸಿಲುಕಿಸಲು ಯತ್ನಿಸಿದ್ದರು ಎಂದು ಟೀಕೆ ಮಾಡಿದ್ರು.

ಕಾಂಗ್ರೆಸ್-ಜೆಡಿಎಸ್ ಯಾವುದೇ ಸೈದ್ಧಾಂತಿಕ ನಿಲುವುಗಳಿಲ್ಲ. ಮಹಾದಾಯಿ ವಿಚಾರದಲ್ಲಿ ರೈತರನ್ನು ಎತ್ತಿಕಟ್ಟುವ ಕೆಲಸ‌ ನಡೆಯುತ್ತಿದೆ. ಬಿಜೆಪಿ ವಿರುದ್ಧ, ನನ್ನ ವಿರುದ್ಧ ರೈತರನ್ನು ಎತ್ತಿಕಟ್ಟಲಾಯಿತು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಇವರಿಗೆ ಜನತೆ ಪಾಠ‌ಕಲಿಸಿದ್ದಾರೆ ಎಂದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ