ಸೋನಿಯಾ ಗಾಂಧಿ ಜೈಲಿಗೆ ಹೋಗೋದು ಪಕ್ಕಾ?

ಭಾನುವಾರ, 14 ಏಪ್ರಿಲ್ 2019 (15:05 IST)
ಚುನಾವಣೆ ನಂತರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ವಾದ್ರಾ ಜೈಲಿಗೆ ಹೋಗಲಿದ್ದಾರೆ. ಹೀಗಂತ ಬಿಜೆಪಿ ಮುಖಂಡ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಮುಖಂಡ ಗೋ.ಮಧುಸೂಧನ್, ಚಾಮರಾಜನಗರದಲ್ಲಿ ನಡೆದ ಚುನಾವಣಾ ಬೃಹತ್ ಪ್ರಚಾರ ಸಭೆಯಲ್ಲಿ  ಮಾತನಾಡಿದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ವಾದ್ರಾ ಲಕ್ಷಾಂತರ ಕೋಟಿ ರೂ.ಗಳ ಹಗರಣಗಳಲ್ಲಿ ಬೇಲ್ ಪಡೆದು ಜೈಲಿಂದ ಹೊರಗಡೆ ಇದ್ದಾರೆ.  ಆದರೆ ಚುನಾವಣೆ ನಂತರ ಈ ಹಗರಣಗಳು ಬೆಳಕಿಗೆ ಬಂದು ಈ ನಾಲ್ಕು ಜನರು ಜೈಲು ಸೇರಲು ಸೇರುವುದು ಖಚಿತ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕಳ್ಳ ಎಂದು ಹೇಳುವ ರಾಹುಲ್ ಗಾಂಧಿ ಮೂರ್ಖರಂತೆ ಮಾತನಾಡುತ್ತಿದ್ದಾರೆ. ಇನ್ನೂ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಸಹ ಬೇಲ್ ನಲ್ಲಿದ್ದಾರೆ ಇವರಿಂದ ಹೇಗೆ ತಾನೆ ರಾಜ್ಯ ಮತ್ತು ದೇಶ ಅಭಿವೃದ್ಧಿಯಾಗಲಿದೆ ಎಂದು ಕೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ