ಸಿಎಂ ಕಟೌಟ್ ಗೆ ಹಾಲಿನ ಅಭಿಷೇಕ

ಸೋಮವಾರ, 15 ಏಪ್ರಿಲ್ 2019 (12:53 IST)
ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಕಟೌಟ್ ಗೆ ರೈತರು ಹಾಲಿನ ಅಭಿಷೇಕ ಮಾಡಿದ್ದಾರೆ.

ಕಬ್ಬಿನ ಬಾಕಿ ಹಣ 17.20 ಕೋಟಿ ಬಿಡುಗಡೆ ಮಾಡಿದ್ದ ಸಿಎಂ ಹಾಗೂ ಭತ್ತಕ್ಕೆ ಬೆಂಬಲ ನೀಡಿದ್ದರಿಂದ ರೈತರು ಖುಷ್ ಆಗಿದ್ದು,  ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಟೌಟ್ ಗೆ ಕಬ್ಬಿನ ಹಾಲು ಅಭಿಷೇಕ ಮಾಡಲಾಗಿದೆ.

ಮಂಡ್ಯ ತಾಲ್ಲೂಕಿನ ಕಾರಸವಾಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಬ್ಬಿನ ಬಾಕಿ ಹಣ 17.20 ಕೋಟಿ ಬಿಡುಗಡೆ ಮಾಡಿದ್ದ ಸಿಎಂ ಹಾಗೂ ಭತ್ತಕ್ಕೆ ಬೆಂಬಲ ನೀಡಿದ್ದರಿಂದಾಗಿ ಸಂತಸಗೊಂಡಿರುವ ರೈತರು ಹಾಲಿನ ಅಭಿಷೇಕ ಮಾಡಿದ್ದಾರೆ.

ಕಾರಸವಾಡಿ, ಮಂಗಲ, ಹೆಮ್ಮಿಗೆ, ಸೂನಗಹಳ್ಳಿ, ಹನಿಯಂಬಾಡಿ ಸೇರಿದಂತೆ ಅಕಪಕ್ಕದ ಗ್ರಾಮದ ರೈತರು ಭಾಗಿಯಾಗಿದ್ದರು.
ಕಬ್ಬಿನ ಹಾಲು ಮತ್ತು ಭತ್ತದಿಂದ ಅಭಿಷೇಕ ಮಾಡಿ ಹರ್ಷ ವ್ಯಕ್ತಪಡಿಸಿದ ರೈತರು, ಸಿಎಂ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಘೋಷಣೆ ಕೂಗಿದರು.

ಇನ್ನು ಮೇಳಾಪುರ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರ ನಡೆಸಿದ್ರು. ನಿಖಿಲ್‌ರನ್ನು ಅದ್ದೂರಿಯಾಗಿ ಸ್ವಾಗತಿಸಿದ ಗ್ರಾಮಸ್ಥರು, ಎತ್ತಿನಗಾಡಿಯಲ್ಲಿ ರೋಡ್ ಶೋ ನಡೆಸಿದ ನಿಖಿಲ್ ಕುಮಾರಸ್ವಾಮಿ ಮತ ಯಾಚಿಸಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ