ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಚ್ಛಾಟನೆಗೆ ಆಗ್ರಹ

ಭಾನುವಾರ, 14 ಏಪ್ರಿಲ್ 2019 (18:02 IST)
ಡಿಸಿಎಂ ಭಾಷಣ ಮಾಡುತ್ತಿರುವಾಗಲೇ ಎದ್ದು ನಿಂತ ಕೈ ಪಾಳೆಯದ ಕಾರ್ಯಕರ್ತರು, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಉಚ್ಛಾಟನೆಗೆ ಆಗ್ರಹ ಮಾಡಿದ ಘಟನೆ ನಡೆದಿದೆ.

ಜೆಡಿಎಸ್- ಕಾಂಗ್ರೆಸ್ ಸಮಾವೇಶದಲ್ಲಿ ಒತ್ತಾಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ. ಮಂಡ್ಯದ ಎ‌.ಸಿ. ಮಾದೇಗೌಡ ಸಮುದಾಯ ಭವನದಲ್ಲಿ ಸಮಾವೇಶ ನಡೆಯುತ್ತಿದೆ. ಅಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭಾಷಣ ಮಾಡುವಾಗ ಕಾರ್ಯಕರ್ತರಿಂದ ಈ ಆಗ್ರಹ ಕೇಳಿಬಂದಿತು.

ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಪಕ್ಷದ ಸೂಚನೆ ಪಾಲಿಸ್ತಿಲ್ಲ. ಅವ್ರ ಮೇಲೆ ಕ್ರಮ ಕೈಗೊಳ್ಳಿ. ಪಕ್ಷ ಹೇಳಿದ ಸೂಚನೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ತೇವೆ ಎಂದು ಡಿಸಿಎಂ ಹೇಳಿದ್ರು.

ಪಕ್ಷೇತರ ಅಭ್ಯರ್ಥಿ ಗೆ ಬಿಜೆಪಿ ಬೆಂಬಲ ಕೊಟ್ಟಿದೆ ಅಂತ ಡಿಸಿಎಂ ಹೇಳಿದಾಗ, ಈ ನಡುವೆ ಭಾಷಣಕ್ಕೆ ಅಡ್ಡಿಪಡಿಸಿದ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್, ಅವ್ರು ಬಿಜೆಪಿ ಅಭ್ಯರ್ಥಿಯೇ ಸಾರ್... ಬೆಂಬಲಿತ ಅಭ್ಯರ್ಥಿ ಅಲ್ಲ ಅಂತ ಹೇಳಿದ್ರು.

ಇನ್ನು, ಪಕ್ಷೇತರ ಅಭ್ಯರ್ಥಿ ಬೆಂಬಲಿಸಬೇಡಿ ನಿಖಿಲ್ ಬೆಂಬಲಿಸಿ ಎಂದ ಡಿಸಿಎಂ ಮನವಿ ಮಾಡಿದ್ರು. ರಾಹುಲ್ ಪ್ರಧಾನಿ ಆಗಿ, ನಿಖಿಲ್ ಎಂಪಿ‌ ಆದ್ರೆ ಹೇಗಿರುತ್ತೆ. ಇಬ್ಬರು ಅಧಿಕಾರದಲ್ಲಿದ್ರೆ ಮಂಡ್ಯ ಅಭಿವೃದ್ಧಿ ಆಗುತ್ತೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ