ಪೊಲೀಸರು ತಪಾಸಣೆ ಮಾಡಿದ ಕಾರ್ ಯಾರದ್ದು?

ಬುಧವಾರ, 3 ಏಪ್ರಿಲ್ 2019 (14:47 IST)
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಕಾರನ್ನು ತಪಾಸಣೆ ಒಳಪಡಿಸಿದ ಘಟನೆ ನಡೆದಿದೆ.

ಚನ್ನರಾಯಪಟ್ಟಣಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಪಯಣಿಸುತ್ತಿದ್ದ ಕಾರನ್ನು ಹಿರಿಸಾವೆ ಚೆಕ್ ಪೋಸ್ಟ್ ಬಳಿ ಚೆಕ್ ಮಾಡಲಾಯಿತು. ಸಿಎಂ ಕಾರನ್ನೇ ಪೊಲೀಸರು ತಪಾಸಣೆಗೆ ಒಳಪಡಿಸಿದರು. ತಪಾಸಣೆಗೆ ಧಾರಾಳವಾಗಿ ಅವಕಾಶವನ್ನು ನೀಡಿದ್ದಾರೆ ಸಿಎಂ.

ಹಿರಿಸಾವೆ ಚೆಕ್ ಪೋಸ್ಟ್ ಬಳಿ ಪ್ರತಿ ವಾಹನವನ್ನು ತಪಾಸಣೆ ನೆಡೆಸುತ್ತಿದ್ದ ಪೊಲೀಸರು ಕರ್ತವ್ಯ ಮೆರದಿದ್ದಾರೆ. ಪ್ರತಿ ವಾಹನ ತಪಾಸಣೆ ನೆಡೆಸಬೇಕು ಎಂಬ ಆದೇಶದ ಮೇಲೆ ಕಾರ್ಯ ಪ್ರರ್ವತ್ತರಾಗಿದ್ದ‌ ಪೊಲೀಸರು ಸಿಎಂ ಕಾರನ್ನೂ ತಪಾಸಣೆ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ