ಮಂಡ್ಯ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Mandya loksabha election 2019 Live updates

[$--lok#2019#state#karnataka--$]
ಹೈವೋಲ್ಟೇಜ್ ಕದನವಾಗಿರುವ ಮಂಡ್ಯ ಕ್ಷೇತ್ರ 2019ರ ಲೋಕಸಭೆ ಚುನಾವಣೆಯಲ್ಲಿ ದೇಶದ ಗಮನ ಸೆಳೆದಿದೆ. ಜೆಡಿಎಸ್ ಗೆ ಇಲ್ಲಿ ಪಕ್ಷೇತರ ಅಭ್ಯರ್ಥಿಯೇ ತೀವ್ರ ಪೈಪೋಟಿ ಒಡ್ಡಿದ್ದಾರೆ. 
 
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ನಿಂದ ಹಾಗೂ ದಿ.ಅಂಬರೀಶ್ ಪತ್ನಿ ಸುಮಲತಾ ಪಕ್ಷೇತರರಾಗಿ ಕಣದಲ್ಲಿದ್ದಾರೆ. 
 
ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಎಂಟು ಜನ ಜಿಲ್ಲೆಯ ಶಾಸಕರು ಅಷ್ಟ ದಿಕ್ಪಾಲಕರಂತೆ ಗೆಲುವಿಗೆ ಹೆಗಲು ಕೊಟ್ಟಿದ್ದಾರೆ. ಬಿಜೆಪಿ ತನ್ನ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕೆ ಇಳಿಸದೇ ಪಕ್ಷೇತರರಾಗಿರುವ ಸುಮಲತಾರನ್ನು ಬೆಂಬಲಿಸಿದೆ. ನಟ ಯಶ್, ದರ್ಶನ್ ಪ್ರಚಾರ ಹಾಗೂ ಸಚಿವರು, ಸಿಎಂ ನಡೆಸಿದ ಪ್ರಚಾರ ಇಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಯಿತು.
 
2018 ರ ಉಪಚುನಾವಣೆಯಲ್ಲಿ ಜೆಡಿಎಸ್ ನ ಎಲ್.ಆರ್.ಶಿವರಾಮೇಗೌಡರು ತಮ್ಮ ಎದುರಾಳಿ ಬಿಜೆಪಿಯ ಡಾ.ಸಿದ್ದರಾಮಯ್ಯರನ್ನು 3 ಲಕ್ಷ 25 ಸಾವಿರ ದಾಖಲೆ ಮತಗಳ ಅಂತರದಿಂದ ಸೋಲಿಸಿದ್ದರು. 
[$--lok#2019#constituency#karnataka--$]
ಒಟ್ಟು 17,10,910 ರಲ್ಲಿ 8,54,637 ಪುರುಷರು, 8,56,117 ಮಹಿಳೆಯರು ಹಾಗೂ 147 ಇತರೆ ಮತದಾರರಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ