ಪತ್ನಿಯ ಗಂಟಲು ಸೀಳಿ ಕೊಲೆ ಮಾಡಿದ ವೈದ್ಯ

ಮಂಗಳವಾರ, 23 ಫೆಬ್ರವರಿ 2021 (09:12 IST)
ಚೆನ್ನೈ : ವೈದ್ಯನೊಬ್ಬ ಪತ್ನಿಯ  ಗಂಟಲು ಸೀಳಿ ಕೊಲೆ ಮಾಡಿ ತನ್ನ ಕಾರಿನಲ್ಲಿ ಪರಾರಿಯಾದ ಘಟನೆ ಚೆಂಗಲ್ಪಟ್ಟುನ ಮಧುರಂಟಕಂನಲ್ಲಿ ನಡೆದಿದೆ.

ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ವೈದ್ಯ ಪತ್ನಿಯ ಜೊತೆ ಆಗಾಗ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಆತನಿಂದ ಪ್ರತ್ಯೇಕವಾಗಿ ವಾಸಿಸಲು ಶುರುಮಾಡಿದ್ದಳು. ಇದರಿಂದ ಕೋಪಗೊಂಡ ಆತ ಪತ್ನಿಯ ಮನೆಗೆ ನುಗ್ಗಿ  ಗಂಟಲು ಸೀಳಿ ಕೊಲೆ ಮಾಡಿ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ. ಪತ್ನಿ ಸಾವನಪ್ಪಿದ್ದಾಳೆ. ಆದರೆ ಪರಾರಿಯಾಗುತ್ತಿದ್ದ ಆರೋಪಿ ಕಾರು ಅಪಘಾತದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ