ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರದಾನಮಂತ್ರಿಯಾಗಲು ಅರ್ಹರಲ್ಲ ಎಂದು ಡಿಎಂಕೆ ಪಕ್ಷದ ಉತ್ತರಾಧಿಕಾರಿ ಎಂ.ಕೆ.ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಯಾವುದೇ ಮೋದಿ ಅಲೆಯಿಲ್ಲ. ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ. ಮಾಧ್ಯಮಗಳು ಮಾತ್ರ ಮೋದಿ ಬಗ್ಗೆ ಮಾತನಾಡುತ್ತಿವೆ. ಆದರೆ, ಮೋದಿಯನ್ನು ಜನತೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಮೋದಿ ಗುಜರಾತ್ ಅಭಿವೃದ್ದಿಯ ಬಗ್ಗ ಮಾತನಾಡುತ್ತಾರೆ. ಆದರೆ, ವಾಸ್ತವಾಂಶದಲ್ಲಿ ಗುಜರಾತ್ ಅವರು ಹೇಳಿದಷ್ಟು ಅಭಿವೃದ್ಧಿಯಾಗಿಲ್ಲ. ತಮ್ಮ ರಾಜ್ಯವನ್ನೇ ಅಭಿವೃದ್ಧಿಪಡಿಸದ ಮೋದಿ ದೇಶವನ್ನು ಹೇಗೆ ಅಭಿವೃದ್ಧಿಪಥದತ್ತ ತೆಗೆದುಕೊಂಡು ಹೋಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಅಭಿವೃಧಿ ಹರಿಕಾರ ಎಂದು ಬಿಜೆಪಿಯಿಂದ ಕರೆಸಿಕೊಳ್ಳುವ ನರೇಂದ್ರ ಮೋದಿಗೆ ಸೋಲಿನ ಭೀತಿ ಕಾಡುತ್ತಿದೆ. ಆದ್ದರಿಂದ ಎರಡು ಕ್ಷೇತ್ರಗಳ್ಲಲಿ ಕಣಕ್ಕಿಳಿದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮೋದಿ ವೈವಾಹಿಕ ಜೀವನದ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಟಾಲಿನ್, ಜನತೆ ಅದರ ಬಗ್ಗೆ ಯೋಚನೆ ಮಾಡುತ್ತಾರೋ ಇಲ್ಲವೋ ಆದರೆ,. ಬಿಜೆಪಿ ನಾಯಕರು ಚಿಂತನೆ ಮಾಡುವ ಅಗತ್ಯವಿದೆ ಎಂದರು.