ರೈಲಿನಿಂದ ಬಿದ್ದ ಬಾಲಕಿ: ನಡುರಾತ್ರಿಯಲ್ಲಿ 16 ಕಿ.ಮೀ ನಡೆದು ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಲಲಿತಪುರಕ್ಕೆ ಬಾಲಕಿಯನ್ನು ಕೊಂಡೊಯ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಬಾಲಕಿ ಪೋಷಕರ ಮಡಿಲು ಸೇರಿದ್ದಾಳೆ. ಸಂಕಷ್ಟ ತಿಳಿದು ನಾವೆಲ್ಲ ಒಂದು ತಂಡವಾಗಿ ಚುರುಕಾಗಿ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಯಿತು ಎಂದು ಉತ್ತರ ಪ್ರದೇಶ ಪೊಲೀಸ್ ಎಕ್ಸ್ ತಾಣದಲ್ಲಿ ಈ ಕುರಿತು ಬರೆದುಕೊಂಡಿದೆ.