ಬಾಬಾ ಸಿದ್ದೀಕಿ ಹತ್ಯೆ ಹಂತಕರನ್ನು ಗಲ್ಲಿಗೇರಿಸುತ್ತೇವೆ: ಸಿಎಂ ಏಕನಾಥ ಶಿಂದೆ
ಪೊಲೀಸರು ಈಗಾಗಲೇ ಹರಿಯಾಣದ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23), ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಪುಣೆಯ ಸಹ ಸಂಚುಕೋರ ಪ್ರವೀಣ್ ಲೋನ್ಕರ್ ಅವರನ್ನು ಬಂಧಿಸಿದ್ದಾರೆ. ಶಂಕಿತ ಶೂಟರ್ ಶಿವಕುಮಾರ್ ಗೌತಮ್‌ಗಾಗಿ ಮುಂಬೈ ಪೊಲೀಸರು ಮಧ್ಯ ಪ್ರದೇಶದ ಉಜ್ಜಯಿನಿ ಮತ್ತು ಖಾಂಡ್ವಾ ಜಿಲ್ಲೆಗಳ ಪೂಜಾ ಸ್ಥಳಗಳ ಬಳಿ ತೀವ್ರ ಶೋಧ ನಡೆಸಿದ್ದಾರೆ.