‘ಆರ್ ಎಸ್ಎಸ್ ನವರು ಏನು ಪಾಕಿಸ್ತಾನದಿಂದ ಬಂದವರೇ?’

ಮಂಗಳವಾರ, 20 ಜೂನ್ 2017 (08:45 IST)
ನವದೆಹಲಿ: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದಲಿತ ನಾಯಕ ರಾಮನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡಿ ಬಿಜೆಪಿ ದಲಿತ ರಾಜಕಾರಣ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವುದಕ್ಕೆ ಪಕ್ಷ ತಿರುಗೇಟು ನೀಡಿದೆ.

 
ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ರನ್ನು ಆರ್ ಎಸ್ಎಸ್ ಹಿನ್ನಲೆಯಿಂದ ಬಂದವರು ಎಂಬ ಕಾರಣಕ್ಕೆ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿದೆ ಎಂದು ಮಮತಾ ಬ್ಯಾನರ್ಜಿ, ಸೀತಾರಾಂ ಯಚೂರಿ ಸೇರಿದಂತೆ ಹಲವು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಕೈಲಾಶ್ ವಿಜಯ್ ವಾಗ್ರಿಯಾ ‘ಒಂದು ವೇಳೆ ಕೋವಿಂದ್ ಆರ್ ಎಸ್ಎಸ್ ಹಿನ್ನಲೆಯವರಾದರೆ ಏನಾಯಿತೀಗ? ಆರ್ ಎಸ್ ಎಸ್ ಸಂಘಟನೆ ಪಾಕಿಸ್ತಾನದಿಂದ ಬಂದಿದ್ದಾ? ಒಬ್ಬ ಚಾಯ್ ವಾಲಾ ಪ್ರಧಾನಿ ಹಾಗೂ ಒಬ್ಬ ದಲಿತ ನಾಯಕ ರಾಷ್ಟ್ರಪತಿಯಾಗುತ್ತಿದ್ದಾರೆ ಎಂದು ನಾವು ಹೆಮ್ಮೆ ಪಡಬೇಕು’ ಎಂದು ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಆದರೆ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ,  ಸಿಪಿಐಎಂ ನಾಯಕ ಸೀತಾರಾಂ ಯಚೂರಿ ಒಲವು ವ್ಯಕ್ತಪಡಿಸಿಲ್ಲ. ಹೀಗಾಗಿ ಈ ಅಭ್ಯರ್ಥಿಗೆ ಈ ಪಕ್ಷಗಳ ಬೆಂಬಲ ಸಿಗುವುದು ಸಂಶಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ