Dharmasthala: ಚಿನ್ನಯ್ಯ ತಂದಿದ್ದ ಬುರುಡೆ ಹಿಂದಿದೆ ರೋಚಕ ಕಹಾನಿ

Krishnaveni K

ಸೋಮವಾರ, 25 ಆಗಸ್ಟ್ 2025 (10:10 IST)
ಧರ್ಮಸ್ಥಳ: ನೂರಾರು ಶವಗಳನ್ನು ಹೂತಿದ್ದೇನೆ ಎಂದು ಬುರುಡೆಯೊಂದನ್ನು ಸಾಕ್ಷಿಯಾಗಿ ತಂದಿದ್ದ ಚಿನ್ನಯ್ಯನ ಕಹಾನಿ ರೋಚಕವಾಗಿದೆ. ಆತನ ಬಗ್ಗೆ ಒಂದೊಂದೇ ವಿಚಾರಗಳು ಇದೀಗ ಬಯಲಾಗುತ್ತಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನುಹೂತಿದ್ದೇನೆ ಎಂದು ದೂರು ನೀಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿ ಪೊಲೀಸರು ಈಗ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.  ಈ ವೇಳೆ ಸಾಕಷ್ಟು ವಿಚಾರಗಳು ಹೊರಬರುತ್ತಿದೆ.

ಈ ನಡುವೆ ಚಿನ್ನಯ್ಯ ಮೊದಲು ಸಾಕ್ಷಿಯಾಗಿ ತಂದಿದ್ದ ಬುರುಡೆಯ ಹಿಂದೆಯೇ ಇಂಟ್ರೆಸ್ಟಿಂಗ್ ಕಹಾನಿಯಿದೆ. ಈ ಬುರುಡೆಯನ್ನು ಈತನಿಗೆ ಇಷ್ಟೆಲ್ಲಾ ನಾಟಕವಾಡಲು ಪಿತೂರಿ ನಡೆಸಿದ್ದ ಗ್ಯಾಂಗೇ ನೀಡಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಬುರುಡೆಯನ್ನು ಮೆಡಿಕಲ್ ರಿಸರ್ಚ್ ಸೆಂಟರ್ ನಿಂದ ತರಲಾಗಿತ್ತು.

40 ವರ್ಷ ಹಳೆಯ ಬುರುಡೆ ಇದಾಗಿದ್ದು ಇದು ಹಾಳಾಗದಂತೆ ಸಂರಕ್ಷಿಸಿಡಲು ವಾರ್ನಿಶ್ ಪೈಂಟ್ ಕೂಡಾ ಮಾಡಲಾಗಿತ್ತು. ಚಿನ್ನಯ್ಯನಿಗೆ ಧರ್ಮಸ್ಥಳ ವಿರೋಧಿ ಹೋರಾಟದ ಗುಂಪು ಈ ಬುರುಡೆ ತಂದುಕೊಟ್ಟಿತ್ತು. ಚಿನ್ನಯ್ಯನ ಜೊತೆಗೆ ಬುರುಡೆಯನ್ನೂ ಈ ಗ್ಯಾಂಗ್ ದೆಹಲಿಗೆ ಕರೆದೊಯ್ದು ಅಲ್ಲಿ ಪ್ರತಿಷ್ಠಿತ ವ್ಯಕ್ತಿಯ ಭೇಟಿ ಮಾಡಿ ತೋರಿಸಲಾಗಿತ್ತು. ಬುರುಡೆ ಸಮೇತ ಪೊಲೀಸರ ಮುಂದೆ ಬಂದು ದೂರು ಕೊಡಲು ಇದೇ ಗ್ಯಾಂಗ್ ಚಿನ್ನಯ್ಯನಿಗೆ ಮಾನಸಿಕವಾಗಿಯೂ ಕಿರುಕುಳ ನೀಡಿತ್ತು ಎನ್ನಲಾಗಿದೆ. ಇದೆಲ್ಲವೂ ಈಗ ತನಿಖೆ ವೇಳೆ ಬಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ