‘ಸರ್ಕಾರಿ ಕಾರ್ಯಕ್ರಮದ ಮೆನುವಿನಲ್ಲಿ ಮಾಂಸ ನಿಷೇಧಿಸಿ’

ಮಂಗಳವಾರ, 25 ಏಪ್ರಿಲ್ 2017 (11:26 IST)
ನವದೆಹಲಿ: ದೇಶದಲ್ಲೆಡೆ ಗೋ ಮಾಂಸ ನಿಷೇಧ ಹಾಗೂ ಅನಧಿಕೃತ ಮಾಂಸದಂಗಡಿಗಳಿಗೆ ಬೀಗ ಮುದ್ರೆ ಹಾಕುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಪ್ರಾಣಿ ದಯಾ ಸಂಘ ಪೆಟಾ ಸರ್ಕಾರಿ ಕಾರ್ಯಕ್ರಮದಲ್ಲಿ ನಡೆಯುವ ಔತಣಕೂಟದಲ್ಲಿ ಮಾಂಸದೂಟಕ್ಕೆ ಬ್ರೇಕ್ ಹಾಕಲು ಮನವಿ ಮಾಡಿದೆ.

 
ಸರ್ಕಾರಿ ಕಾರ್ಯಕ್ರಮಗಳ ಮೆನುವಿನಲ್ಲಿ ಮಾಂಸದೂಟವನ್ನು ನಿಷೇಧಿಸಲು ಪೆಟಾ ಪ್ರಧಾನಿ ಮೋದಿಗೆ ಮನವಿ ಮಾಡಿದೆ. ಇತ್ತೀಚೆಗೆ ಜರ್ಮನಿಯಲ್ಲಿ ಸರ್ಕಾರ ಇಂತಹದ್ದೊಂದು ಕ್ರಮ ಕೈಗೊಂಡ ಬೆನ್ನಲ್ಲೇ ಪೆಟಾ ಭಾರತದ ಪ್ರಧಾನಿಗೆ ಈ ರೀತಿ ಮನವಿ ಮಾಡಿದೆ.

ಆ ಮೂಲಕ ನಮ್ಮಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸೋಣ ಎಂಬುದು ಪೆಟಾ ಉದ್ದೇಶ. ವಾತಾವರಣದಲ್ಲಿ ತಾಪಮಾನ ಏರಿಕೆಗೆ ಮಾಂಸದ ಉತ್ಪನ್ನಗಳೂ ಕಾರಣ ಎಂಬುದು ತಿಳಿದು ಬಂದ ಹಿನ್ನಲೆಯಲ್ಲಿ ಪೆಟಾ ಈ ಮನವಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ