ಪರೀಕ್ಷೆ ಇದೆ ಬನ್ನಿ ಎಂದು ವಿದ್ಯಾರ್ಥಿನಿಯರನ್ನು ಕರೆದ ಶಿಕ್ಷಕರು ಕೊನೆಗೆ ಮಾಡಿದ್ದೇನು?
10 ನೇ ತರಗತಿಯ 17 ವಿದ್ಯಾರ್ಥಿನಿಯರನ್ನು ಪ್ರಾಕ್ಟಿಕಲ್ ಪರೀಕ್ಷೆ ನೆಪದಲ್ಲಿ ಶಾಲೆಗೆ ಕರೆಸಿಕೊಂಡು ಶಿಕ್ಷಕ ಮತ್ತು ಶಾಲೆಯ ಮಾಲಿಕ ಅವರಿಗೆ ಆಹಾರದಲ್ಲಿ ಮತ್ತು ಬರಿಸುವ ಔಷಧ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.
ಬಳಿಕ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಮರುದಿನ ಮನೆಗೆ ಕಳುಹಿಸಿದ್ದಾರೆ. ವಿದ್ಯಾರ್ಥಿನಿಯರೆಲ್ಲರೂ ಬಡ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. ಆದರೆ ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರ ಪೋಷಕರು ವಿಚಾರ ತಿಳಿದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದಾಗ ಸ್ಥಳೀಯ ಶಾಸಕರಿಗೆ ದೂರು ನೀಡಿದ್ದಾರೆ. ಅವರು ಪೊಲೀಸರಿಗೆ ಕರೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಇದರೊಂದಿಗೆ ಇಡೀ ಪ್ರಕರಣ ಬಯಲಾಗಿದೆ. ಇದೀಗ ಇಬ್ಬರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.