112 ವರ್ಷ ಹಳೆಯ ಸೇತುವೆ ಶೀಘ್ರದಲ್ಲೇ ಡೆಮಾಲಿಷ್!
ಮುಂಬೈ : ಧಾರಾವಿ, ಎಲ್‌ಬಿಎಸ್ ರಸ್ತೆ ಮತ್ತು ಈಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು 1912 ರಲ್ಲಿ ನಿರ್ಮಿಸಲಾಗಿತ್ತು. ಸಿಯಾನ್ ಸೇತುವೆ ಸ್ಥಗಿತಗೊಂಡ ಬಳಿಕ ಮುಂಬೈನಲ್ಲಿ ವಾಹನ ದಟ್ಟಣೆ ಹೆಚ್ಚಳವಾಗುವ ನಿರೀಕ್ಷೆಯಿದೆ. 112 ವರ್ಷಗಳ ಇತಿಹಾಸವುಳ್ಳ ಮುಂಬೈನ ಪ್ರಸಿದ್ದ ಸಿಯಾನ್ ಸೇತುವೆ ಫೆ. 29 ರಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಲಿದೆ. ಈ ಸೇತುವೆಯನ್ನು ಧ್ವಂಸಗೊಳಿಸಿ, ಕುರ್ಲಾ ಮತ್ತು ಪರೇಲ್ ನಡುವಿನ ರೈಲು ಮಾರ್ಗ ನಿರ್ಮಿಸಲು ಸ್ಥಳೀಯ ಆಡಳಿತ ನಿರ್ಧಿರಿಸಿದೆ. ರೈಲು ಮಾರ್ಗ ನಿರ್ಮಾಣದ ಬಳಿಕ ಸೇತುವೆಯನ್ನು ಮರು ನಿರ್ಮಿಸುವ ಸಾಧ್ಯತೆಯಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.