ಬಾಲಕಿಯನ್ನು ಮದುವೆಯಾಗಿ 50,000ಕ್ಕೆ ಮಾರಿದ

ಗುರುವಾರ, 28 ಜುಲೈ 2016 (09:49 IST)
14 ವರ್ಷದ ಬಾಲಕಿಯನ್ನು ಮದುವೆಯಾಗಿ ಆಕೆಯನ್ನು 50,000ಕ್ಕೆ ಮಾರಾಟ ಮಾಡಿದ ಹೇಯ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಪೀಡಿತ ಬಾಲಕಿ ಈಗ ಪೊಲೀಸರ ಆಶ್ರಯದಲ್ಲಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಬನಾರಸ್‌‌ನ  ಬಾಲಕಿ ಅನಾಥಳಾಗಿದ್ದು ನವದೆಹಲಿಯಲ್ಲಿನ ಅನಾಥಾಶ್ರಮವೊಂದರಲ್ಲಿ ವಾಸವಾಗಿದ್ದಳು. ಆಕೆಯನ್ನು ಅಲ್ಲಿಂದ ಕರೆತಂದ ಸಂಬಂಧಿಕನೊಬ್ಬ ಮದುವೆಯನ್ನು ಮಾಡಿಸಿದ. ಆಕೆಯನ್ನು ವರಿಸಿದ ಯುವಕ ಅಮಾನುಷವಾಗಿ ಶೋಷಿಸಿದನಲ್ಲದೇ ಬಳಿಕ ಮುಂಬೈಗೆ ಕರೆ ತಂದು ಮಹಿಳೆಯೋರ್ವಳಿಗೆ ಮನೆಗೆಲಸದವಳಾಗಿ 50,000ಕ್ಕೆ ಮಾರಾಟ ಮಾಡಿದ್ದಾನೆ.

ಅಲ್ಲಿ ಸಹ ಆಕೆ ದೌರ್ಜನ್ಯಕ್ಕೊಳಗಾಗಿದ್ದು ತಲೆಗೆ ಗಂಭೀರವಾದ ಗಾಯಗಳಾಗಿವೆ. ತನ್ನ ಸಂಕಷ್ಟವನ್ನಾಕೆ ತಾನು ವಾಸವಾಗಿದ್ದ ಕಟ್ಟಡದ ಭದ್ರತಾ ಸಿಬ್ಬಂದಿ ಬಳಿ ಹೇಳಿಕೊಂಡಾಗ ಅವರು ಪೊಲೀಸರ ಮೊರೆ ಹೋಗಲು ತಿಳಿಸಿದ್ದಾರೆ. ಸಮಯವನ್ನು ನೋಡಿಕೊಂಡು ಬಾಲಕಿ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾಳೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ