14 ವರ್ಷದ ಬಾಲಕಿ ಮೇಲೆ 14 ಜನರಿಂದ ಗ್ಯಾಂಗ್ ರೇಪ್: ಈ ಹುಡುಗಿ ಕಥೆ ಕೇಳಿದರೆ ಕಣ್ಣಲ್ಲಿ ನೀರು ಬರುತ್ತೆ
ಭಾನುವಾರ, 19 ಮಾರ್ಚ್ 2017 (12:07 IST)
ಎಂಥೆಂಥಾ ಕಾನೂನುಗಳು ಬಂದರೂ ಕಾಮುಕರನ್ನ ತಡೆಯಲು ಸಾಧ್ಯವಾಗುತ್ತಿಲ್ಲ. ಬಾಂಗ್ಲಾದೇಶದ 14 ವರ್ಷದ ಹುಡುಗಿ ಮೇಲೆ ಅಹ್ಮದಾಬಾದ್ ಮತ್ತು ಮ್ಯಾಂಗ್ರೋಲ್`ನಲ್ಲಿ 14 ಜನರಿಂದ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತೆಯ ದೂರನ್ನ ಆಧರಿಸಿ ಕಾಮುಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮ್ಯಾಂಗ್ರೋಲ್`ನ ಬಸ್ ಟರ್ಮಿನಲ್`ನಲ್ಲಿ ಅಳುತ್ತಾ ನಿಂತಿದ್ದ ಹುಡುಗಿಯನ್ನ ಸಾರ್ವಜನಿಕರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಹುಡುಗಿ ಭಾಷೆ ಗೊತ್ತಿಲ್ಲದ ಕಾರಣ ಅಷ್ಟಾಗಿ ಪ್ರಕರಣ ತಿಳಿದುಬಂದಿಲ್ಲ. ಪೊಲೀಸರು ಯುವತಿಯನ್ನ ವಿಚಾರಿಸಿದಾಗ ಕೆಲವರು ಈಕೆಯನ್ನ ಭಾರತದ ಏಜೆಂಟರಿಗೆ ಮಾರಿರುವುದು ಬೆಳಕಿಗೆ ಬಂದಿದೆ.
ಅಹಹ್ಮದಾಬಾದ್`ನ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ ಸೇರಿ ಮ್ಯಾಂಗ್ರೋಲ್`ನಲ್ಲಿ ಕಳೆದೊಂದು ವಾರದಲ್ಲಿ 14 ಮಂದಿ ಅತ್ಯಾಚಾರ ನಡೆಸಿದ್ದಾರೆ. ತನ್ನನ್ನ ಖರೀದಿಸಿದ ಏಜೆಂಟರ್ ಹೆಸರನ್ನ ಸಾಯಿ ಎಂದು ಹುಡುಗಿ ತಿಳಿಸಿದ್ದಾಳೆ. ಸದ್ಯ, ಅಪ್ರಾಪ್ತೆಯನ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.