ಅಮೆರಿಕದ ಉದ್ಯೋಗ ಕಳೆದುಕೊಂಡ 15ರ ಬಾಲಕ?

ಸೋಮವಾರ, 25 ಜುಲೈ 2022 (10:03 IST)
ಮುಂಬೈ : 15 ವರ್ಷದ ಬಾಲಕನೊಬ್ಬ ನ್ಯೂಜೆರ್ಸಿ ಜಾಹೀರಾತು ಏಜೆನ್ಸಿಯು ಆಯೋಜಿಸಿದ್ದ ಡಿ-ಕೋಡಿಂಗ್ (ವೆಬ್ ಡೆವಲಪ್ಮೆಂಟ್ ಕೋಡಿಂಗ್) ಸ್ಪರ್ಧೆಯಲ್ಲಿ ಗೆದ್ದು, ತನ್ನ ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ವೇತನ ಪ್ಯಾಕೇಜ್ ಪಡೆಯುವ ಉದ್ಯೋಗದಿಂದ ವಂಚಿತನಾಗಿದ್ದಾನೆ.

ಮಹಾರಾಷ್ಟ್ರ ನಾಗ್ಪುರದ 15 ವರ್ಷದ ಬಾಲಕ ವೇದಾಂತ್ ಅಮೆರಿಕದ ನ್ಯೂಜೆರ್ಸಿ ಜಾಹೀರಾತು ಏಜೆನ್ಸಿಯು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಗೆದ್ದಿದ್ದಾನೆ. ಆದರೆ ಈತನ ವಯಸ್ಸಿನ ಮಿತಿ ತಿಳಿದ ನಂತರ ಕಂಪನಿಯು ಉದ್ಯೋಗ ನೀಡುವ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದೆ. 

ಬಾಲಕ ವೇದಾಂತ್ ತನ್ನ ತಾಯಿಯ ಹಳೆಯ ಲ್ಯಾಪ್ಟಾಪ್ನಲ್ಲಿ ಇನ್ಸ್ಟಾಗ್ರಾಮ್ ವೀಕ್ಷಣೆ ಮಾಡುತ್ತಿದ್ದಾಗ ವೆಬ್ ಡೆವಲಪ್ಮೆಂಟ್ ಸ್ಪರ್ಧೆ ಆಯೋಜಿಸಿರುವುದು ಗೊತ್ತಾಗಿದೆ. ನಂತರ ಸ್ಪರ್ಧೆಗೆ ನೋಂದಣಿ ಮಾಡಿಕೊಂಡು ಎರಡು ದಿನಗಳ ಅವಧಿಯಲ್ಲಿ 2,066 ಸಾಲುಗಳ ಕೋಡ್ ಮತ್ತು ಸ್ಪರ್ಧೆಯಲ್ಲಿ ಜಯಗಳಿಸಿದ್ದಾನೆ.

ಬಳಿಕ ನ್ಯೂಜೆರ್ಸಿ ಜಾಹೀರಾತು ಏಜೆನ್ಸಿಯು ಈತನಿಗೆ ಕೆಲಸ ನಿಯೋಜಿಸಲು ಹಾಗೂ ಇತರ ಕೋಡರ್ಗಳನ್ನೂ ತಾನು ನಿರ್ವಹಿಸುವಂತೆ ಮಾಡಲು ಎಚ್ಆರ್ಡಿ ತಂಡದಲ್ಲಿ ಕೆಲಸ ನೀಡಿದೆ. ಆದರೆ ಈತ 15 ವರ್ಷದ ಬಾಲಕನೆಂದು ತಿಳಿದ ನಂತರ ಪ್ರಸ್ತಾಪವನ್ನು ಹಿಂತೆದುಕೊಂಡಿದೆ ಎಂದು ವರದಿಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ