ತಿರುವನಂತಪುರಂ : 17 ವರ್ಷಗಳ ಹಿಂದೆ ಡಬಲ್ ಮರ್ಡರ್ ಮಾಡಿರುವುದಾಗಿ ತನ್ನ ಸಹ ಕೈದಿಗಳೊಂದಿಗೆ ಗುಟ್ಟನ್ನು ಬಿಚ್ಚಿಟ್ಟ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಜಯಾನಂದನ್(53) ಸಿಕ್ಕಿಬಿದ್ದಿರುವ ಕೈದಿ ತಿರುವನಂತಪುರಂ ಕೇಂದ್ರ ಕಾರಾಗ್ರಹದಲ್ಲಿ ಇತರ ಕೈದಿಗಳೊಡನೆ ಮಾತನಾಡುತ್ತಿದ್ದಾಗ ತಾನು ಮಾಡಿರುವ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ. 8 ಕೊಲೆ ಆರೋಪಗಳನ್ನು ಎದುರಿಸುತ್ತಿದ್ದ ಜಯಾನಂದನ್ನನ್ನು ತಿರುವನಂತಪುರಂ ಜೈಲಿನಲ್ಲಿ ಇರಿಸಲಾಗಿತ್ತು.
ಆತನ ಜೊತೆಗಿದ್ದ ಇಬ್ಬರು ಸಹ ಕೈದಿಗಳೊಡನೆ ರಹಸ್ಯವನ್ನು ಬಿಚ್ಚಿಟ್ಟಿದ್ದು, ಈ ಮೂಲಕ ಸಿಕ್ಕಿ ಬಿದ್ದಿದ್ದಾನೆ. 2004ರ ಮೇ 30 ರಂದು ಜಯಾನಂದನ್ ಜೋಡಿ ಕೊಲೆ ಮಾಡಿದ್ದ.
ನಾನಿಕುಟ್ಟಿಯಮ್ಮಾಳ್(74) ಮತ್ತು ಆಕೆಯ ಸಹೋದರಿಯ ಮಗ ನಾರಾಯಣ ಅಯ್ಯರ್(60) ಎಂಬವರ ಕೊಲೆಗೈದು, 350 ಗ್ರಾಂ ಚಿನ್ನ ಹಾಗೂ 15 ಗ್ರಾಂ ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿದ್ದ.
ಇದೀಗ ಘಟನೆಯನ್ನು ಜಯಾನಂದನ್ ಸಹಕೈದಿಗಳೊಡನೆ ಬಾಯಿಬಿಟ್ಟಿದ್ದರಿಂದ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ಅಪರಾಧದ ವಿಭಾಗದಲ್ಲಿ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.