19ರ ಯುವತಿ ಮೇಲೆ 23 ಮಂದಿಯಿಂದ ಗ್ಯಾಂಗ್‌ ರೇಪ್‌: 12 ಆರೋಪಿಗಳು ಅರೆಸ್ಟ್‌

Sampriya

ಶುಕ್ರವಾರ, 11 ಏಪ್ರಿಲ್ 2025 (18:59 IST)
ವಾರಾಣಾಸಿ: 19ರ ಯುವತಿ ಮೇಲೆ ಆರು ದಿನಗಳ ಅವಧಿಯಲ್ಲಿ 23 ಮಂದಿ ಯುವಕರು ಅತ್ಯಾಚಾರ ಎಸಗಿರುವ ಪ್ರಕರಣ ಇದೀಗ ಪೊಲೀಸರು 12ಜನರನ್ನು ಬಂಧಿಸಿದ್ದಾರೆ. ವಾರಾಣಾಸಿಯಲ್ಲಿ ನಡೆದ ಈ ಸಾಮೂಹಿಕ ಅತ್ಯಾಚಾರ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಆರೋಪಿಗಳ ವಿರುದ್ಧ 'ಕಠಿಣ ಕ್ರಮ' ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ದೂರಿನ ಪ್ರಕಾರ, ಮಾರ್ಚ್ 29 ಮತ್ತು ಏಪ್ರಿಲ್ 4 ರ ನಡುವೆ ಹಲವಾರು ಸ್ಥಳಗಳಲ್ಲಿ 23 ಪುರುಷರು 19ವರ್ಷದ ಯುವತಿ ಮೇಲೆ ನಿರಂತರ ರೇಪ್ ಮಾಡಿದ್ದಾರೆ. ಈ ಸಂಬಂಧ ಸಂತ್ರಸ್ತೆಯ ಮನೆಯವರು ದೂರು ನೀಡಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 70(1)(ಸಾಮೂಹಿಕ ಅತ್ಯಾಚಾರ), 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 123 (ಅಪರಾಧ ಮಾಡುವ ಉದ್ದೇಶದಿಂದ ವಿಷದ ಮೂಲಕ ಗಾಯಗೊಳಿಸುವುದು ಇತ್ಯಾದಿ), 126(2) (ತಪ್ಪು ಸಂಯಮ), 127(2) (ತಪ್ಪು ಬಂಧನ) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.

ಈ ಪ್ರಕರಣದಲ್ಲಿ 23 ಆರೋಪಿಗಳಲ್ಲಿ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಗಳನ್ನು ರಾಜ್ ವಿಶ್ವಕರ್ಮ, ಸಮೀರ್, ಆಯುಷ್, ಸೊಹೈಲ್, ದಾನಿಶ್, ಅನ್ಮೋಲ್, ಸಾಜಿದ್, ಜಹೀರ್, ಇಮ್ರಾನ್, ಜೈಬ್, ಅಮನ್ ಮತ್ತು ರಾಜ್ ಖಾನ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ