ಇದೀಗ ತಮಿಳಿನಾಡಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಡಿಎಂಕೆ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಮಾತೆತ್ತಿದರೆ ಹಿಂದಿ ಹೇರಿಕೆ ಎನ್ನುತ್ತೀರಿ. ತಮಿಳು ನಾಯಕರು ಯಾರೂ ತಮಿಳಿನಲ್ಲಿ ಸಹಿ ಮಾಡುವುದನ್ನು ನಾನು ನೋಡಿಲ್ಲ. ಕನಿಷ್ಠ ಸಹಿಯನ್ನಾದರೂ ತಮಿಳಿನಲ್ಲಿ ಮಾಡಿ ಎಂದು ಮೋದಿ ವ್ಯಂಗ್ಯ ಮಾಡಿದ್ದಾರೆ.
ಕೆಲವೊಮ್ಮೆ ತಮಿಳುನಾಡಿನ ನಾಯಕರ ಪತ್ರ ಬಂದಾಗ ನನಗೆ ಅಚ್ಚರಿಯಾಗುತ್ತದೆ. ಅದರಲ್ಲಿ ತಮಿಳಿನಲ್ಲಿ ಸಹಿ ಕೂಡಾ ಇರುವುದಿಲ್ಲ. ತಮಿಳುನಾಡಿನ ಬಡ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ಕೋರ್ಸ್ ಗಳನ್ನು ತಮಿಳಿನಲ್ಲೇ ಪರಿಚಯಿಸಿ. ಕಳೆದ 10ವರ್ಷಗಳಲ್ಲಿ ತಮಿಳುನಾಡಿಗೆ 11 ವೈದ್ಯಕೀಯ ಕಾಲೇಜುಗಳು ಸಿಕ್ಕಿವೆ. ಬಡ ಮಕ್ಕಳೂ ವೈದ್ಯರಾಗುವ ಕನಸು ನನಸು ಮಾಡಲು ತಮಿಳು ಭಾಷೆಯಲ್ಲಿ ವೈದ್ಯಕೀಯ ಕೋರ್ಸ್ ಗಳನ್ನು ಆರಂಭಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.