ಪಾಕ್ ಬಾರ್ಡರ್ ಆಕ್ಷ್ಯನ್ ತಂಡದಿಂದ ಗುಂಡಿನ ದಾಳಿ: ಇಬ್ಬರು ಯೋಧರ ಹತ್ಯೆ

ಗುರುವಾರ, 22 ಜೂನ್ 2017 (20:27 IST)
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನದ ಸೈನಿಕರು ಇಬ್ಬರು ಸೇನಾ ಯೋಧರನ್ನು ಕೊಂದಿರುವ ಹೇಯ ಘಟನೆ ವರದಿಯಾಗಿದೆ.
 
ವರದಿಗಳ ಪ್ರಕಾರ, ಪಾಕಿಸ್ತಾನಿ ಬಾರ್ಡರ್ ಆಕ್ಷನ್ ಟೀಮ್ (ಬಾಟ್) ಮಧ್ಯಾಹ್ನ 2 ಗಂಟೆಗೆ 600 ಮೀಟರ್ ಭಾರತೀಯ ಗಡಿಯೊಳಗೆ ಪ್ರವೇಶಿಸಿ, ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದೆ. ಪಾಕ್‌ಗೆ ಭಾರತೀಯ ಯೋಧರು ತಕ್ಕ ಪ್ರತಿಕ್ರಿಯ ನೀಡಿದಾಗ ಒಬ್ಬ ಪಾಕ್ ಯೋಧ ಗಾಯಗೊಂಡಿದ್ದು ಮತ್ತೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿದ್ದಾನೆ. 
 
ಪ್ರಸಕ್ತ ವರ್ಷ ಪೂಂಚ್ ಪ್ರದೇಶದಲ್ಲಿ ಮೂಪನೇ ಬಾರಿಗೆ ಪಾಕಿಸ್ತಾನ ಬಾರ್ಡರ್ ಆರ್ಕ್ಷನ್ ಟೀಮ್ ಸೈನಿಕರ ಮೇಲೆ ದಾಳಿ ನಡೆಸಿ ಹೇಡಿತನ ಮೆರೆದಿದೆ.
 
"ಭಾರತೀಯ ಸೈನ್ಯದ 'ಏರಿಯಾ ಡಾಮಿನೇಷನ್ ಪೆಟ್ರೋಲ್'" ಪಡೆಯನ್ನು ಗುರಿಯಾಗಿಸಿಕೊಂಡ ಪಾಕ್, ಭಾರಿ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಪೋಸ್ಟ್‌ಗಳ ಮೇಲೆ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದಾರೆ.
 
ಪಾಕಿಸ್ತಾನ ಮತ್ತು ಭಾರತೀಯ ಯೋಧರ ಮಧ್ಯೆ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ 
ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ