ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾದ ಬಳಿಕ ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿದರೆ ಇವರಿಗಿಂತ ಅಸಾದುದ್ದೀನ್ ಒವೈಸಿಯೇ ವಾಸಿ ಎನ್ನುತ್ತಿದ್ದಾರೆ ಸಾರ್ವಜನಿಕರು.
ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಪಾಕಿಸ್ತಾನ ಜೊತೆ ಯುದ್ಧ ಮಾಡಬೇಕಿಲ್ಲ ಎಂದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಮಾತು ವಿವಾದವಾಗುತ್ತಿದ್ದಂತೇ ಸಿದ್ದರಾಮಯ್ಯ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
ಇನ್ನೊಂದೆಡೆ ಸಚಿವ ಆರ್ ಬಿ ತಿಮ್ಮಾಪುರ ಕೂಡಾ ಧರ್ಮ ಕೇಳಿ ಹೊಡೆದಿದ್ದಾರೆ ಎಂದು ಯಾರಿಗೆ ಗೊತ್ತು? ಎಂದು ಲಘುವಾಗಿ ಮಾತನಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಪಹಲ್ಗಾಮ್ ದಾಳಿ ಧರ್ಮದ ಮೇಲೆ ದಾಳಿಯಲ್ಲ, ಇದೆಲ್ಲಾ ಬಿಜೆಪಿಯವರ ಸೃಷ್ಟಿ ಎಂದು ಟೀಕೆಗೊಳಗಾಗಿದ್ದರು.
ರಾಷ್ಟ್ರಮಟ್ಟದಲ್ಲೂ ಕೆಲವು ಕಾಂಗ್ರೆಸ್ ನಾಯಕರು ಪಹಲ್ಗಾಮ್ ದಾಳಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಕಾಮೆಂಟ್ ಮಾಡುತ್ತಿದ್ದು, ಇವರಿಗಿಂತ ಒವೈಸಿಯೇ ವಾಸಿ. ಮುಸ್ಲಿಂ ಪಕ್ಷದ ನಾಯಕರಾದರೂ ಪಾಕಿಸ್ತಾನದ ನರಿಬುದ್ಧಿಯನ್ನು ಖಂಡಿಸುತ್ತಿದ್ದಾರೆ. ಉಗ್ರರನ್ನು ದಮನಿಸಬೇಕು ಎನ್ನುತ್ತಿದ್ದಾರೆ ಎಂದು ಹೊಗಳಿದ್ದಾರೆ.