ಭಾರತವನ್ನು ಧ್ವೇಷಿಸುತ್ತೇನೆ, ಕೊಳಕು ಹಿಂದೂಗಳು ಹಿಂದೆ ಬಿದ್ದಿದ್ದಾರೆ ಎಂದ ಮಂಗಳೂರು ವೈದ್ಯೆ ಫಾತಿಮಾ: ವಿವಾದ
ಮೊನ್ನೆಯಷ್ಟೇ ಪಹಲ್ಗಾಮ್ ದಾಳಿ ಬಳಿಕ ಮಂಗಳೂರು ಮೂಲದ ನಿಚ್ಚು ಮಂಗಳೂರು ಎಂಬ ಫೇಸ್ ಬುಕ್ ಖಾತೆಯ ವ್ಯಕ್ತಿ ಉಗ್ರರ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್ ಮಾಡಿದ್ದ. ಆತನ ವಿರುದ್ಧ ದೂರು ದಾಖಲಾಗಿತ್ತು.
ಇದೀಗ ಮಂಗಳೂರು ಮೂಲದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯೆ ಆಸಿಫಾ ಸರದಿ. ಈಕೆಯ ವಿರುದ್ಧ ಈಗ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೇಶದಲ್ಲೇ ಇದ್ದುಕೊಂಡು ಇಷ್ಟು ವಿದ್ಯಾವಂತೆಯಾಗಿದ್ದೂ ನಮ್ಮ ದೇಶದ ವಿರುದ್ಧವೇ ಪೋಸ್ಟ್ ಮಾಡಿರುವುದು ನಾಚಿಕೆಗೇಡಿನ ಸಂಗತಿ.
ಈಕೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ವೈದ್ಯೆ. ಅದೇ ಆಸ್ಪತ್ರೆಯ ಎಚ್ಆರ್ ಮೊಹಮ್ಮದ್ ಅಸ್ಲಾಂ ಈಕೆ ವಿರುದ್ಧ ದೂರು ನೀಡಿದ್ದಾರೆ. ಫಾತಿಮಾ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.