ಬಿಜೆಪಿ ಶಾಸಕ ಸುಧೀರ್ ಗಾಡ್ಗಿಲ್ ಕಾರಿನಿಂದ 20 ಸಾವಿರ ಕೋಟಿ ಹೊಸ ನೋಟುಗಳ ವಶ

ಶನಿವಾರ, 28 ಜನವರಿ 2017 (14:04 IST)
ನೋಟು ನಿಷೇಧದ ನಂತರ ಬಿಜೆಪಿ ನಾಯಕರಿಂದ ಕೋಟಿ ಕೋಟಿ ಹೊಸ ನೋಟುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬಿಜೆಪಿ ಶಾಸಕ ಸುಧೀರ್ ಗಾಡ್ಗಿಲ್ ಕಾರಿನಿಂದ 20 ಸಾವಿರ ಕೋಟಿ ರೂಪಾಯಿಗಳ ಹೊಸ ನೋಟುಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.
 
ಕೆಲ ಬಿಜೆಪಿ ನಾಯಕರ ಬಳಿ ನೋಟು ನಿಷೇಧಕ್ಕಿಂತ ಮುಂಚಿತವಾಗಿಯೇ ಹೊಸ 2000 ಮುಖಬೆಲೆಯ ನೋಟುಗಳಿರುವುದು ಪತ್ತೆಯಾಗಿದೆ. ಮತ್ತಷ್ಟು ಕೆಲ ಬಿಜೆಪಿ ನಾಯಕರು ನೋಟು ನಿಷೇಧದ ಸುಳಿವು ತಿಳಿದು ಭಾರಿ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಖರೀದಿಸಿ ತಮ್ಮ ಕಪ್ಪು ಹಣವನ್ನು ಖಾಲಿ ಮಾಡಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿ ಶಾಸಕ ಸುಧೀರ್ ಗಾಡ್ಗಿಲ್ ಅವರ ಬೋಲೆರೋ ಕಾರಿನಲ್ಲಿದ್ದ 2 ಸಾವಿರ ಮುಖಬೆಲೆಯ 20 ಸಾವಿರ ಕೋಟಿ ರೂಪಾಯಿಗಳ ಕಂತೆ ಕಂತೆ ಪತ್ತೆಯಾಗಿರುವುದು ಆದಾಯ ತೆರಿಗೆ ಅಧಿಕಾರಿಗಳಿಗೆ ದಿಗ್ಭ್ರಮೆ ಮೂಡಿಸಿದೆ.
 
ಬಿಜೆಪಿ ಶಾಸಕ ಸುಧೀರ್ ಗಾಡ್ಗಿಲ್ ಬೋಲೆರೋ ಕಾರಿನಲ್ಲಿ ದೊರೆತಿರುವ 20 ಸಾವಿರ ಕೋಟಿ ರೂಪಾಯಿಗಳ ಹೊಸ ನೋಟುಗಳನ್ನು ನೋಡಿದಲ್ಲಿ ನೋಟು ನಿಷೇಧಕ್ಕಿಂತ ಮುಂಚೆಯೇ ಬಿಜೆಪಿ ನಾಯಕರ ಬಳಿ ಹೊಸ ನೋಟು ಬಂದಿರಬಹುದು ಎಂದು ಆದಾಯ ತೆರಿಗೆ ಅಧಿಕಾರಿಗಳು ಶಂಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ