ಚಾರ್ ಧಾಮ್ ಯಾತ್ರೆ ವೇಳೆ ಕಳೆದ 2 ತಿಂಗಳಲ್ಲಿ 203 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ ಉತ್ತರಾಖಂಡ್ ಸರಕಾರ ತಿಳಿಸಿದೆ.
ಉತ್ತರಾಖಂಡದ ತುರ್ತು ಪರಿಸ್ಥಿತಿ ನಿರ್ವಹಣಾ ತಂಡವು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಚಾರ್ ಧಾಮ್ ಯಾತ್ರೆ ವೇಳೆ ಮೃತಪಟ್ಟವರಲ್ಲಿ ಹೆಚ್ಚಿನರು ಹೃದಯಾಘಾತ ಇತರೆ ಆರೋಗ್ಯ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ.
ಮೃತಪಟ್ಟವರ ಪೈಕಿ ಈ ಪೈಕಿ 97 ಜನ ಕೇದರನಾಥದಲ್ಲಿ, 51 ಮಂದಿ ಬದರೀನಾಥ್, 13 ಜನ ಗಂಗೋತ್ರಿ ಹಾಗೂ 42 ಮಂದಿ ಯಮುನೋತ್ರಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಂಕಿ ಅಂಶಗಳ ಪ್ರಕಾರ ಚಾರ್ ಧಾಮ್ ಮೇ 3ರಿಂದ ಇಲ್ಲಿಯವರೆಗೂ ಸುಮಾರು 25 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂದು ತಿಳಿದು ಬಂದಿದೆ.
ಈ ಮೊದಲು ಚಾರ್ ಧಾಮ್ ಯಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ ಮೊದಲೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರುವಂತೆ ಉತ್ತರಾಖಂಡ ಸರ್ಕಾರ ಸಲಹೆ ನೀಡಿತ್ತು.