ಆಂಧ್ರ- ಓರಿಸ್ಸಾ ಗಡಿಯಲ್ಲಿ ಎನ್‌ಕೌಂಟರ್: 21 ನಕ್ಸಲರ ಮಾರಣಹೋಮ

ಸೋಮವಾರ, 24 ಅಕ್ಟೋಬರ್ 2016 (14:26 IST)
ಆಂಧ್ರಪ್ರದೇಶ- ಓರಿಸ್ಸಾ ಗಡಿಯಲ್ಲಿರುವ ಮಲಕನಗಿರಿ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಿಗ್ರಹಪಡೆ 21 ನಕ್ಸಲರನ್ನು ಹತ್ಯೆ ಮಾಡಿದ್ದು ಹಲವರನ್ನು ಗಂಭೀರವಾಗಿ ಗಾಯಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಆಂಧ್ರ ಪೊಲೀಸರ ಪ್ರಕಾರ,  ಒರಿಸ್ಸಾ ಮತ್ತು ಆಂಧ್ರಪ್ರದೇಶದ ನಕ್ಸಲ್ ನಿಗ್ರಹ ಪಡೆಗಳು ಜಂಟಿಯಾಗಿ ನಡೆಸಿದ ಎನ್‌ಕೌಂಟರ್‌ನಲ್ಲಿ 21 ನಕ್ಸಲರು ಸಾವನ್ನಪ್ಪಿದ್ದಾರೆ. ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳದ ಯೋಧನೊಬ್ಬ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ನಕ್ಲಸ್ ನಿಗ್ರಹ ಪಡೆ ಮತ್ತು ನಕ್ಸಲರ ನಡುವೆ ಸುಮಾರು ಒಂದು ಗಂಟೆ ಗುಂಡಿನ ಚಕಮಕಿ ನಡೆದಿದೆ. ನಕ್ಸಲರಿಂದ ನಾಲ್ಕು ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
 
ನಕ್ಸಲರೊಂದಿಗೆ ಏನ್‌ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆ ಆಂಧ್ರಪ್ರದೇಶಧ ಪೊಲೀಸ್ ಮಹಾನಿರ್ದೇಶಕ ನಂದೂರಿ ಸಾಂಬಶಿವಾರಾವ್ ಕೂಡಲೇ ವಿಶಾಖ್‌ಪಟ್ಟಣಂಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಅರಣ್ಯ ಪ್ರದೇಶದಲ್ಲಿ ಮತ್ತಷ್ಟು ನಕ್ಸಲರು ಅಡಗಿರುವ ಮಾಹಿತಿಯಿರುವುದರಿಂದ ಜಂಟಿ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ