ಸಲಿಂಗ ಸಂಗಾತಿಯಿಂದ 21 ವರ್ಷದ ವಿದ್ಯಾರ್ಥಿಯ ಹತ್ಯೆ

ಶುಕ್ರವಾರ, 1 ಡಿಸೆಂಬರ್ 2023 (21:00 IST)
ಸಲಿಂಗ ಸಂಗಾತಿ 21 ವರ್ಷದ ವಿದ್ಯಾರ್ಥಿಯನ್ನು ಚೂರಿ ಇಂದ ತಿವಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆ ಸಿಟಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿ ಬಿಬಿಎ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.

ದಾಳಿಯ ನಂತರ, ಆರೋಪಿ ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾನೆ,ಇನ್ನು ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ