23 ವರ್ಷದ ಯುವತಿಯ ಮೇಲೆ ಫೇಸ್ ಬುಕ್ ಗೆಳೆಯನಿಂದ ಸಾಮೂಹಿಕ ಅತ್ಯಾಚಾರ

ಶನಿವಾರ, 5 ಜನವರಿ 2019 (08:02 IST)
ಮುಜಾಫರ್ ನಗರ : ಫೇಸ್ ಬುಕ್ ಗೆಳೆಯನೊಬ್ಬ ತನ್ನ ಸೋದರನ ಜತೆಗೆ ಸೇರಿ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿ ಬಲವಂತದ ಮದುವೆಯಾಗಿರುವ ಘಟನೆಯು ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.


ಯುವಕನ ಹೆಸರು ಸೋನು ಎಂಬುದಾಗಿ ತಿಳಿದುಬಂದಿದ್ದು, ಈತ ಫೇಸ್ ಬುಕ್ ನಲ್ಲಿ 23 ವರ್ಷದ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು  ಹೋಟೆಲ್ ಗೆ ಕರೆಸಿಕೊಂಡು, ಅಲ್ಲಿ ಆತನ ಸೋದರನ ಜತೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಅದನ್ನು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಬಲವಂತವಾಗಿ ಮದುವೆಯಾಗಿದ್ದಾನೆ.


ಈ ಘಟನೆಯ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಸೋನು ಮತ್ತು ಆತನ ಕುಟುಂಬದ ಹತ್ತು ಮಂದಿ ಸದಸ್ಯರ ವಿರುದ್ಧ ಕೇಸು ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ