ಕಾಕ್ಪೋರಾದಲ್ಲಿ ಉಗ್ರರ ಬಗ್ಗೆ ಖಚಿತ ಮಾಹಿತಿ ಪಡೆದ ಯೋಧರು ದಾಳಿ ಮಾಡಿದ್ದು, ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಎಲ್ಲ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಈ ಮೂಲಕ ಕೆಲ ಘಂಟೆಗಳಿಂದ ನಡೆಯುತ್ತಿದ್ದ ಎನ್ ಕೌಂಟರ್ ಕಾರ್ಯಾಚರಣೆ ಇದೀಗ ಅಂತ್ಯವಾಗಿದೆ. ಮೃತ ಉಗ್ರರನ್ನು ಲಷ್ಕರ್ ಸಂಘಟನೆಯ ಮಜೀದ್ ಮೀರ್, ಶರೀಖ್ ಅಹ್ಮಮದ್ ಮತ್ತು ಇರ್ಷಾದ್ ಅಹ್ಮದ್ ಎಂದು ಗುರುತಿಸಲಾಗಿದೆ ಎಂದು ಸೇನೆ ತಿಳಿಸಿದೆ.