ಮೂವರು ಶಂಕಿತ ಐಸಿಸ್ ಉಗ್ರರ ಬಂಧನ

ಗುರುವಾರ, 20 ಏಪ್ರಿಲ್ 2017 (12:37 IST)
ಉತ್ತರಪ್ರದೇಶದ ಎಟಿಎಸ್ ಮತ್ತು ದೆಹಲಿಯ ಪೊಲೀಸ್ ಸ್ಪೆಷಲ್ ಸೆಲ್ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಶಂಕಿತ ಐಸಿಸ್ ಉಗ್ರರನ್ನ ಬಂಧಿಸಲಾಗಿದೆ. ಭಯೋತ್ಪಾದಕ ಕೃತ್ಯಕ್ಕೆ ಸಂಚು, ಅಂತರ್ ರಾಜ್ಯ ಉಗ್ರ ಚಟುವಟಿಕೆ ಆರೋಪದಡಿ ಬಂಧಿಸಲಾಗಿದೆ.
 

ಮುಂಬೈ, ಲೂಧಿಯಾನಾ ಮತ್ತು ಬಿಜ್ನೋರ್`ನಲ್ಲಿ ಮೂವರು ಶಂಕಿತರನ್ನ ಬಂಧಿಸಲಾಗಿದೆ. ಈ ಪ್ರದೇಶಗಳಲ್ಲಿ ಸ್ಲೀಪರ್ ಸೆಲ್ ಕಾರ್ಯಾಚರಣೆ ನಡೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸ್ ಮತ್ತು ಎಟಿಎಸ್ ಕಾರ್ಯಾಚರಣೆ ನಡೆಸಿದ್ದವು. ಆಂಧ್ರಪ್ರದೇಶ ಪೊಲೀಸ್, ಮಹಾರಾಷ್ಟ್ರ ಎಟಿಎಸ್, ಬಿಹಾರ ಪೊಲೀಸ್, ಪಂಜಾಬ್ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಹೆಚ್ಚುವರಿ ತನಿಖೆ ಸಹ ಮುಂದುವರೆದಿದ್ದು, 6 ಜನರನ್ನ ವಿಚಾರಣೆಗೊಳಪಡಿಸಲಾಗಿದೆ. ಬಂಧಿತರು ಇರಾಕಿನಿಂದ ಬರುತ್ತಿದ್ದ ಸೂಚನೆಗಳನ್ನ ಪಾಲಿಸುತ್ತಾ ಹೊಸ ಸಂಘಟನೆ ಕಟ್ಟಲು ಮುಂದಾಗಿದ್ದರು. ಬಳಿಕ ಭಯೋತ್ಪಾದಕ ಸಂಘಟನೆ ಯುವಕರನ್ನ ಸೆಳೆಯುವ ಮತ್ತು ಸ್ಫೋಟದಂತಹ ವಿಧ್ವಂಸಕ ಕೃತ್ಯದ ಯೋಜನೆ ಸಹ ಇಟ್ಟುಕೊಂಡಿದ್ದರು.

ಹತ್ತಿರತ್ತಿರ ತಿಂಗಳ ಹಿಂದೆ ಪೊಲೀಸರಿಗೆ ಐಸಿಸ್ ಜಾಲದ ಸುಳಿವು ಸಿಕ್ಕಿತ್ತು. 12 ಗಂಟೆ ಕಾರ್ಯಾಚರಣೆಯಲ್ಲಿ ಲಖನೌದಲ್ಲಿ ಸೈಫುಲ್ಲಾ ಎಂಬಾತನನ್ನ ಪೊಲೀಸರು ಕೊಂದಿದ್ದರು. 

ವೆಬ್ದುನಿಯಾವನ್ನು ಓದಿ