ಮುಂಬೈ : ಶಿವಸೇನೆ ಒಡೆದಂತೆ ಮಹಾರಾಷ್ಟ್ರದಲ್ಲಿ ಎನ್ಸಿಪಿ ಒಡೆಯುತ್ತಾ ಎಂಬ ಅನುಮಾನ ಸೃಷ್ಟಿಯಾಗಿದೆ. ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಬಿಜೆಪಿ-ಶಿಂಧೆ ಶಿವಸೇನೆ ಸರ್ಕಾರದಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಜತೆ ಸೇರಲು 53 ಎನ್ಸಿಪಿ ಶಾಸಕರ ಪೈಕಿ 40 ಶಾಸಕರ ಸಹಿ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ವರದಿಯ ನಡುವೆ ಅಜಿತ್ ಪವಾರ್ ಸಾಮಾಜಿಕ ಜಾಲತಾಣದಲ್ಲಿ ಎನ್ಸಿಪಿ ಲೋಗೋವನ್ನು ತೆಗೆದಿದ್ದು ಅಂತೆ-ಕಂತೆ ಸುದ್ದಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅಜಿತ್ ಪವಾರ್, ಜೀವ ಇರುವವರೆಗೂ ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ನಾನು ಬಿಜೆಪಿ ಸೇರುತ್ತೇನೆ ಎನ್ನುವ ವರದಿಗಳಲ್ಲಿ ಸುಳ್ಳು. ನಾನು ಸೇರಿದಂತೆ ಎಲ್ಲಾ ಶಾಸಕರು ಎನ್ಸಿಪಿಯೊಂದಿಗೆ ಇದ್ದೇವೆ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
ಅಜಿತ್ ಪವಾರ್ ನಮ್ಮ ಪಕ್ಷದಲ್ಲೇ ಇರುತ್ತಾರೆ. ಈ ಸುದ್ದಿಗಳು ಎಲ್ಲವೂ ಸುಳ್ಳು ಎಂದು ಎನ್ಸಿಪಿ ವರಿಷ್ಟ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.