ಅಯೋಧ್ಯೆ ರಾಮನಿಗೆ 400 ಕೆಜಿ ತೂಕದ ಬೀಗ
ಉತ್ತರಪ್ರದೇಶ :ಅಲಿಘರ್ ಮೂಲದ 67 ವರ್ಷ ವಯಸಿನ ಸತ್ಯಪ್ರಕಾಶ್ ಅವರು ಈ ಬೀಗವನ್ನು ನಿರ್ಮಿಸಿದ್ದರು. ಆದರೆ ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನಾ ಕಾರ್ಯಕ್ಕೆ ಮುನ್ನವೇ ಅವರು ಕೊನೆಯುಸಿರು ಎಳೆದಿದ್ದರು. ಅಯೋಧ್ಯೆಯಲ್ಲಿ ಜ .22 ರಂದು ನಡೆಯುತ್ತಿರುವ ರಾಮಮಂದಿರ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ಕೆ ಭಕ್ತರೊಬ್ಬರು ವಿಚಿತ್ರ ರೀತಿಯಲ್ಲಿ ಹರಕೆ ಸಲ್ಲಿಸಿದ್ದಾರೆ.
ಬರೋಬ್ಬರಿ 400 ಕೆಜಿ ತೂಕದ ಬೀಗವೊಂದನ್ನು ಅಯೋಧ್ಯೆಗೆ ಕಳಿಸಲಾಗಿದ್ದು, ಇದರ ನಿರ್ಮಾಣಕ್ಕೆ ಆರು ತಿಂಗಳ ಕಾಲ ಶ್ರಮಿಸಲಾಗಿದೆ. ದುರಂತವೆಂದರೆ ಈ ಬೀಗವನ್ನು ನಿರ್ಮಿಸಿದ ಕುಶಲ ಕರ್ಮಿ ಸತ್ಯಪ್ರಕಾಶ್ ಬೀಗ ಅಯೋಧ್ಯೆಗೆ ತಲುಪುವ ಮುನ್ನವೇ ಸಾವನ್ನಪ್ಪಿದ್ದರು. ಅವರ ಅಂತಿಮ ಆಸೆಯಂತೆ ಬೀಗ ಹಾಗೂ 15 ಕೆಜಿ ತೂಕದ ಎರಡು ಬೀಗದ ಕೈಗಳನ್ನು ಅಯೋಧ್ಯೆ ಮಂದಿರಕ್ಕೆ ತಲುಪಿಸಲಾಗಿದೆ.