ಹಾಸನ: ಕಸದ ಬುಟ್ಟಿಯಲ್ಲಿ ಹಳೆ ನೋಟು ದಹನ

ಶನಿವಾರ, 10 ಡಿಸೆಂಬರ್ 2016 (11:14 IST)
ಕಾಳಧನಿಕರು ತಮ್ಮ ಬಳಿಯಿದ್ದ 500 ಮತ್ತು 1,000 ರೂಪಾಯಿ ನೋಟುಗಳನ್ನು ಸುಟ್ಟು ನಾಶ ಮಾಡಲು ಪ್ರಯತ್ನಿಸಿರುವುದು ಹಾಸನದಲ್ಲಿ ಕಂಡು ಬಂದಿದೆ. 
ನಗರದ ಸಂತೆಪೇಟೆಯಲ್ಲಿ ಕಸದ ತೊಟ್ಟಿಯೊಂದರ ಬಳಿ ಈ ಕೃತ್ಯ ಬೆಳಕಿಗೆ ಬಂದಿದ್ದು, ಭಾಗಶಃ ಸುಟ್ಟು ಹೋಗಿರುವ ನೋಟಿನ ಕಂತೆ ಪತ್ತೆಯಾಗಿದ್ದು, ಅಳಿದುಳಿದ ನೋಟುಗಳನ್ನು ಆಯ್ದುಕೊಳ್ಳಲು ಜನರು ಮುಗಿ ಬಿದ್ದಿದ್ದಾರೆ.
 
ಸ್ಥಳಕ್ಕೆ ಭೇಟಿ ನೀಡಿರುವ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
 
ನೋಟುಗಳನ್ನು ಸುಟ್ಟು ಹಾಕಿದವರು ಯಾರು ಎಂಬುದು ಇಲ್ಲಿಯವರೆಗೂ ಪತ್ತೆಯಾಗಿಲ್ಲ. 
 
ನವೆಂಬರ್ 8 ರಂದು ಪ್ರಧಾನಿ ಮೋದಿ ದೊಡ್ಡ ಮುಖಬೆಲೆಯ ಹಳೆಯ ನೋಟುಗಳನ್ನುರದ್ದುಗೊಳಿಸಿದ ಬಳಿಕ ಹಲವೆಡೆ ನೋಟುಗಳನ್ನು ಸುಟ್ಟು ಹಾಕಲಾಗಿದೆ. ನದಿಯಲ್ಲಿ, ಮೋರಿಯಲ್ಲಿ ಕಸದ ತೊಟ್ಟಿಯಲ್ಲಿ ಬೀಸಾಕಿರುವ ಪ್ರಕರಣಗಳು ವರದಿಯಾಗಿವೆ. 
 
ನಿನ್ನೆ ಗುಜರಾತಿನ ಸೂರತ್‌ನ ವರ್ಚಾದ ಮೋರಿಯೊಂದರಲ್ಲಿ 500 ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು. 
 

ವೆಬ್ದುನಿಯಾವನ್ನು ಓದಿ