ಕಳೆದೆರಡು ದಿನಗಳ ಕಣ್ಮರೆಯಾಗಿದ್ದ ಆರು ವರ್ಷದ ಬಾಲಕಿ ಪಕ್ಕದ ಮನೆಯ ಟ್ರಂಕ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಹಾಪುರ್ ಪಟ್ಟದಲ್ಲಿ ನಡೆದಿದೆ.
ಇಂದು ನೆರೆ ಮನೆಯಿಂದ ಕೊಳೆತ ವಾಸನೆ ಬರುತ್ತಿದ್ದ ಹಿನ್ನಲೆ ಪರೀಕ್ಷೆ ನಡೆಸಿದಾಗ ಈ ವಿಷಯ ಬಯಲಿಗೆ ಬಂದಿದ್ದಾರೆ. ಆರು ವರ್ಷದ ಬಾಲಕಿ ಗುರುವಾರ ಸಂಜೆಯಿಂದ ಕಣ್ಮರೆಯಾಗಿದ್ದಳು ಎಂದು ಪೋಷಕರು ಶುಕ್ರವಾರ ದೂರು ನೀಡಿದ್ದರು. ಇನ್ನು ಬಾಲಕಿ ಶವವನ್ನು ಮರೋಣತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಾಪೂರ ಎಸ್ಪಿ ಸರ್ವೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಗುರುವಾರ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಸಂಜೆ 5 30ರ ಸಮಯದಲ್ಲಿ ಅಪ್ಪನ ಬಳಿ ತಿಂಡಿ ಕೊಳ್ಳಲು 5 ರೂ ಕೇಳಿದ್ದಳಂತೆ. ಅದರಂತೆ ಅಪ್ಪ 5 ರೂ ಕೊಟ್ಟಿ ಕಳುಹಿಸಿದ್ದಾರೆ. ಇದಾದ ಬಳಿಕ ಬಾಲಕಿ ಮನೆಗೆ ಮರಳಿಲ್ಲ. ರಾತ್ರಿ ಎಷ್ಟು ಹೊತ್ತಾದರೂ ಬಾಲಕಿ ಮನೆಗೆ ಹಿಂದಿರುಗದ ಹಿನ್ನಲೆ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಿದ್ದಾರೆ. ಆದರೆ, ಬಾಲಕಿ ಸುಳಿವು ಮಾತ್ರ ಸಿಕ್ಕಿಲ್ಲ. ಬಳಿಕ ಶುಕ್ರವಾರ ಬೆಳಗ್ಗೆಯೇ ಪೊಲೀಸರಿಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ.
ಬಾಲಕಿ ನಾಪತ್ತೆಯಾದ ಸಂಕಟದಲ್ಲಿ ಪೋಷಕರು ಇರುವಾಗಲೇ ಅವರ ನೆರೆ ಮನೆಯಿಂದ ಇಂದು ಕೆಟ್ಟ ದುರ್ವಾಸನೆ ಬರಲು ಆರಂಭಿಸಿದೆ. ಅಕ್ಕ ಪಕ್ಕದ ಮನೆಯವರೆಲ್ಲಾ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದರಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಶವದ ಕೊಳೆತ ವಾಸನೆ ಹಿನ್ನಲೆ ಅನುಮಾನ ಗೊಂಡ ಬಾಲಕಿ ಪೋಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.