ಐಟಿ ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್ ಕಟ್

ಗುರುವಾರ, 25 ಮೇ 2023 (12:42 IST)
ನವದೆಹಲಿ : ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಿಂದ ಗುತ್ತಿಗೆದಾರರ ಮೂಲಕ ನೇಮಕಗೊಂಡ ಹೊರಗುತ್ತಿಗೆ ಕಾರ್ಮಿಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.7.7 ರಷ್ಟು ಕಡಿತಗೊಂಡಿದ್ದು, ಒಂದೇ ವರ್ಷದಲ್ಲಿ ಸುಮಾರು 60,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ನೇಮಕಾತಿ ಸಂಸ್ಥೆ ಮಂಗಳವಾರ ತಿಳಿಸಿದೆ.
 
ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಈ ನಡುವೆ ಭಾರತದಲ್ಲಿ ಐಟಿ ಕ್ಷೇತ್ರದ ಕಂಪನಿಗಳಿಂದ ಗುತ್ತಿಗೆದಾರರ ಮೂಲಕ ನೇಮಕಗೊಂಡ ಸುಮಾರು 60 ಸಾವಿರ ಹೊರಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿರುವುದಾಗಿ ನೇಮಕಾತಿ ಸಂಸ್ಥೆ ತಿಳಿಸಿದೆ.

ಐಟಿ ಕ್ಷೇತ್ರದಲ್ಲಿ ಹೊಸ ಉದ್ಯೋಗಗಳ ಸೃಷ್ಟಿ ಕಡಿತಗೊಂಡಿರುವುದರಿಂದ ನೇಮಕಾತಿಗೂ ಹಿನ್ನಡೆಯಾಗಿದೆ ಎಂದು 120ಕ್ಕೂ ಹೆಚ್ಚು ನೇಮಕಾತಿ ಏಜೆನ್ಸಿಗಳನ್ನು ಪ್ರತಿನಿಧಿಸುವ ಭಾರತೀಯ ಸ್ಟಾಫಿಂಗ್ ಫೆಡರೇಷನ್ ಅಧ್ಯಕ್ಷ ಲೋಹಿತ್ ಭಾಟಿಯಾ ತಿಳಿಸಿದ್ದಾರೆ. ಇದರ ಹೊರತಾಗಿಯೂ ಉತ್ಪಾದನಾ ವಲಯ, ಲಾಜಿಸ್ಟಿಕ್ಸ್ ಮತ್ತು ಚಿಲ್ಲರೆ ವಲಯಗಳಲ್ಲಿ ದೇಶೀಯ ಗ್ರಾಹಕರ ಬೇಡಿಕೆಯಿಂದ ನೇಮಕಾತಿ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ