ಚೆನ್ನೈ : ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್ಡೌನ್ ನಡುವೆಯೂ ತಿರುವಂತಿಪುರಂ ಶ್ರೀ ದೇವನಾಥಸ್ವಾಮಿ ದೇಗುಲದ ಹೊರಗೆ 91 ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟಿದೆ.
ಸೋಂಕು ನಿಯಂತ್ರಣ ಕ್ರಮವಾಗಿ ಸರ್ಕಾರ ವಾರಾಂತ್ಯ ಲಾಕ್ಡೌನ್ ಜಾರಿಗೊಳಿಸಿದೆ. ಹೀಗಾಗಿ ಭಾನುವಾರ ದೇಗುಲವನ್ನು ಬಂದ್ ಮಾಡಲಾಗಿತ್ತು. ಆದರೆ ಶುಭ ಮುಹೂರ್ತವಿದ್ದ ಕಾರಣ ಅರ್ಚಕರು ದೇಗುಲದ ಹೊರಗಿನ ರಸ್ತೆಯಲ್ಲಿಯೇ ವಿವಾಹ ನಡೆಸಿಕೊಟ್ಟರು.
ಶುಭ ಮುಹೂರ್ತವಿದ್ದ ಕಾರಣ 110 ಜೋಡಿ ಮದುವೆಗೆ ನೋಂದಣಿ ಮಾಡಿಸಿದ್ದರು. ಬೆಳಗ್ಗೆ 4.30ರಿಂದ 11ರ ನಡುವಿನ ಅವಧಿಯಲ್ಲಿ ವಿವಾಹ ನೆರವೇರಿತು. ವಿಷ್ಣುವಿನ ಈ ದೇವಸ್ಥಾನದಲ್ಲಿ ಮದುವೆಯಾದರೆ ಒಳ್ಳೆಯದು ಎಂಬ ನಂಬಿಕೆಯಿದೆ. ವಿವಿಧ ಭಾಗಗಳ ಜನರು ಬಂದು ಇಲ್ಲಿ ಮದುವೆಯಾಗುತ್ತಾರೆ. ದೇಗುಲದ ಸಭಾಂಗಣದಲ್ಲಿ ಒಟ್ಟಿಗೆ 40 ಜೋಡಿ ವಿವಾಹವಾಗಲು ಅವಕಾಶವಿದೆ.