108 ಅಡಿ ಉದ್ದದ ಅಗರ ಬತ್ತಿಗೆ ಅಗ್ನಿಸ್ಪರ್ಶ

geetha

ಬುಧವಾರ, 17 ಜನವರಿ 2024 (16:00 IST)
ಅಯೋಧ್ಯೆ :  ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅಧ್ಯಕ್ಷರಾದ ಮಹಾಂತ ನೃತ್ಯಗೋಪಾಲ ದಾಸ್‌ ಅವರ ಸಮ್ಮುಖದಲ್ಲಿ ಈ ಬೃಹತ್‌ ಗಾತ್ರದ ಊದುಬತ್ತಿಯನ್ನು ಉರಿಸಲಾಯಿತು. ಶ್ರೀರಾಮ ಮಂದಿರ ಪ್ರತಿಷ್ಠಾಪನೆಗೆ ಕೇವಲ ಆರು ದಿನಗಳಷ್ಟೇ ಬಾಕಿ ಉಳಿದಿದ್ದು,  ಅಯೋಧ್ಯೆಯಲ್ಲಿ ಸಡಗರದ ಸಿದ್ದತೆಗಳು ಸಾಗಿವೆ. ದೇಶದ ವಿವಿಧ ನಗರಗಳಿಂದ ಹಲವು ಬಗೆಯ ವಿಶಿಷ್ಟ ಉಡುಗೊರೆಗಳು ಅಯೋಧ್ಯೆಯನ್ನು ತಲುಪುತ್ತಿವೆ. 
 
ಇದೇ ವೇಳೆ ಗುಜರಾತಿನಲ್ಲಿ ತಯಾರಿಸಿ ಅಯೋಧ್ಯೆಗೆ ತಲುಪಿಸಿದ್ದ 108 ಅಡಿ ಉದ್ದದ ಅಗರಬತ್ತಿಗೆ ಇಂದು ವಿದ್ಯುಕ್ತವಾಗಿ ಅಗ್ನಿ ಸ್ಪರ್ಶ ಮಾಡಲಾಗಿದೆ. ಈ ಬೃಹತ್‌ ಗಾತ್ರದ ಅಗರಬತ್ತಿ ತಯಾರಿಕೆಗೆ ನೂರಾರು ಮಂದಿ ಕಾರ್ಮಿಕರು ಹಲವು ತಿಂಗಳು ಶ್ರಮಿಸಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ