ಕೃಷ್ಣ ಜನ್ಮಭೂಮಿ ಮಸೀದಿ ಸಮೀಕ್ಷೆಗೆ ಸುಪ್ರೀಂ ತಡೆ

Krishnaveni K

ಮಂಗಳವಾರ, 16 ಜನವರಿ 2024 (14:13 IST)
ನವದೆಹಲಿ: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಾಣವಾದ ಬೆನ್ನಲ್ಲೇ ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ಜಾಗದಲ್ಲಿರುವ ಮಸೀದಿ ತೆರುವ ಮಾಡಿ ಮಂದಿರ ಕಟ್ಟಲು ಸಲ್ಲಿಸಲಾಗಿದ್ದ ಅರ್ಜಿಗೆ ಸುಪ್ರೀಂ ತಡೆ ನೀಡಿದೆ.

ಅಲಹಾಬಾದ್ ಹೈಕೋರ್ಟ್ ಈ ಮೊದಲು ಮಥುರಾದಲ್ಲಿ ಕೃಷ್ಣಜನ್ಮಭೂಮಿ ಸ್ಥಳದಲ್ಲಿರುವ ಮಸೀದಿ ಸ್ಥಳ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಿತ್ತು. ವಕೀಲ-ಕಮಿಷನರ್ ಮೂಲಕ ಸ್ಥಳ ಸಮೀಕ್ಷೆ ನಡೆಸಲು ಅಲಹಾಬಾದ್ ಕೋರ್ಟ್ ತೀರ್ಪು ನೀಡಿತ್ತು.

ಆದರೆ ಇದನ್ನು ಪ್ರಶ್ನಿಸಿ ಕೆಲವು ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಸೀದಿ ಸಮೀಕ್ಷೆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಸ್ಥಳೀಯ ಆಯುಕ್ತರ ನೇಮಕವನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಅಸ್ಪಷ್ಟವಾಗಿದೆ ಎಂದು ಕಾರಣ ನೀಡಿ ತಡೆಯಾಜ್ಞೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನು ಜನವರಿ 23 ರಂದು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ರಾಮ ಜನ್ಮಭೂಮಿ ಬಳಿಕ ಭಾರೀ ಚರ್ಚೆಯಾಗಿರುವ ಇನ್ನೊಂದು ಪುಣ್ಯಭೂಮಿಯೆಂದರೆ ಮಥುರಾ. ಇಲ್ಲಿ ಕೃಷ್ಣ ಜನ್ಮಭೂಮಿ ದೇವಾಲಯದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿ ಈ ಹಿಂದೆ ಹಿಂದೂ ದೇವಾಲಯವಾಗಿತ್ತು ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿತ್ತು. ಮಸೀದಿಯ ಕೆಳಗೆ ಕೃಷ್ಣ ಜನ್ಮಸ್ಥಾನವಿದೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ