ನವದೆಹಲಿ : ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಗರ್ಭಿಣಿ ಮಾಡಿದ ಆರೋಪದ ಮೇಲೆ 17 ವರ್ಷದ ಹುಡುಗನನ್ನು ಬಂಧಿಸಿದ ಘಟನೆ ಪೂರ್ವ ದೆಹಲಿಯ ಲಕ್ಷ್ಮೀನಗರ ಪ್ರದೇಶದಲ್ಲಿ ನಡೆದಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯಿಂದ ಪಿಸಿಆರ್ ಪೊಲೀಸರಿಗೆ ಕರೆ ಮಾಡಿದ್ದು, ಏಳು ತಿಂಗಳ ಅಪ್ರಾಪ್ತ ಗರ್ಭಿಣಿ ತಪಾಸಣೆಗಾಗಿ ಬಂದಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಬಾಲಕಿ ತಾನು ಮತ್ತು ಸೋದರ ಸಂಬಂಧಿ ಪರಸ್ಪರ ಪ್ರೀತಿಸಿದ್ದು, 2022ರ ಆಗಸ್ಟ್ 25 ರಂದು ಪಶ್ಚಿಮ ಬಂಗಾಳದಲ್ಲಿ ನಿಕಾಹ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾಳೆ.
ಜನವರಿಯಲ್ಲಿ ದೆಹಲಿಗೆ ಬಂದ ಅವರು, ಪಶ್ಚಿಮ ಜವಾಹರ್ ಪಾರ್ಕ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ತಪಾಸಣೆಗಾಗಿ ಎಲ್ಬಿಎಸ್ ಆಸ್ಪತ್ರೆಗೆ ಬಂದಿದ್ದು, ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ವೈದ್ಯರು ಸಖಿ ಕೇಂದ್ರಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.