ಭೋಪಾಲ್ : ವಿವಾಹ ಸಮಾರಂಭದಲ್ಲಿ ವಧು ಮತ್ತು ವರನ ನಡುವೆ ವಿವಾದ ಏರ್ಪಟ್ಟು ಇಬ್ಬರೂ ವಿಷ ಕುಡಿದಿದ್ದು, ವರ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್ಐ ರಂಜಾನ್ ಖಾನ್, ಕನಾಡಿ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆ ಸಮಾರಂಭದ ವೇಳೆ ವಧು-ವರನ ನಡುವೆ ಜಗಳ ನಡೆದಿದ್ದು, ವರ ವಿಷ ಕುಡಿದು ಈ ವಿಷಯವನ್ನು ವಧುವಿಗೆ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ವಧು ಸಹ ವಿಷ ಕುಡಿದಿದ್ದಾಳೆ ಎಂದರು.
ವಿಷ ಕುಡಿದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ, ವರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ವಧು ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.