ಬಾತ್ ರೂಂನಲ್ಲಿ ಕೂಡಿಹಾಕಿ 6 ವರ್ಷದ ಬಾಲಕಿಯನ್ನು ರೇಪ್ ಮಾಡಿದ 19 ವರ್ಷದ ಯುವಕ

ಶನಿವಾರ, 7 ಡಿಸೆಂಬರ್ 2019 (11:30 IST)
ಕೋಲ್ಕತ್ತಾ: 19 ವರ್ಷದ ಯುವಕನೊಬ್ಬ 6 ವರ್ಷದ ಬಾಲಕಿಯನ್ನು ಬಾತ್ ರೂಂನಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.



ಬಾಲಕಿಯ ನೆರೆಮನೆಯವನಾದ ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗಿ ಕೋಲ್ಕತ್ತಾದ ತಾರತಾಲ ರಸ್ತೆಯಲ್ಲಿರುವ  ಕಟ್ಟಡದ ಮೊದಲ ಮಹಡಿಯೊಂದರಲ್ಲಿ ಬಾತ್ ರೂಂನಲ್ಲಿ ಕೂಡಿಹಾಕಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಬಾಲಕಿ ಮನೆಗೆ ಬಂದು ತನ್ನ ಪೋಷಕರಿಗೆ ತಿಳಿಸಿದ್ದಾಳೆ.


ಈ ಹಿನ್ನಲೆಯಲ್ಲಿ ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ