ಸೋಮವಾರದವರೆಗೆ ರೇಪಿಸ್ಟ್ ಗಳ ಅಂತ್ಯಸಂಸ್ಕಾರವಿಲ್ಲ

ಶನಿವಾರ, 7 ಡಿಸೆಂಬರ್ 2019 (09:22 IST)
ಹೈದರಾಬಾದ್: ಹೈದರಾಬಾದ್ ನ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ್ದ ದುರುಳರನ್ನು ನಿನ್ನೆ ಮುಂಜಾವಿನಲ್ಲಿ ತೆಲಂಗಾಣ ಪೊಲೀಸರು ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದರು.


ಈ ನಾಲ್ವರು ರೇಪಿಸ್ಟ್ ಗಳ ಶವವನ್ನು ಸೋಮವಾರದವರೆಗೆ ಕುಟುಂಬದವರಿಗೆ ಅಂತ್ಯಸಂಸ್ಕಾರಕ್ಕೆ ಒಪ್ಪಿಸದೇ ಇರಲು ಹೈಕೋರ್ಟ್ ಆದೇಶಿಸಿದೆ. ಡಿಸೆಂಬರ್ 9 ರಂದು ರಾತ್ರಿ 8 ಗಂಟೆಯವರೆಗೆ ಮೃತದೇಹಗಳನ್ನು ಇಟ್ಟುಕೊಳ್ಳಲು ಹೈಕೋರ್ಟ್ ಸೂಚಿಸಿದೆ.

ಇದು ನಕಲಿ ಎನ್ ಕೌಂಟರ್ ಆಗಿತ್ತೇ ಅಥವಾ ಪೊಲೀಸರು ಹೇಳಿದಂತೆ ಪ್ರಾಣರಕ್ಷಣೆಗಾಗಿಯೇ ಈ ಎನ್ ಕೌಂಟರ್ ಮಾಡಲಾಗಿದೆಯೇ ಎಂಬ ಕುರಿತಂತೆ ಮಾನವ ಹಕ್ಕುಗಳ ಆಯೋಗ ತನಿಖೆ ನಡೆಸಲಿದೆ. ಈಗಾಗಲೇ ಪೋಸ್ಟ್ ಮಾರ್ಟಂ ನಡೆಸಲಾಗಿದ್ದು, ಆ ವಿಡಿಯೋವನ್ನು ಒದಗಿಸುವಂತೆ ಹೈಕೋರ್ಟ್ ಆದೇಶಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ