ಕೋಲ್ಕತ್ತಾ : 100 ವರ್ಷದ ವೃದ್ಧೆಯ ಮೇಲೆ 20ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಆಗ್ರಾ ಬಿಸ್ವಾಸ್ ಅಲಿಯಾಸ್ ಅಭಿಜಿತ್ ಅತ್ಯಾಚಾರ ಎಸಗಿದ ಆರೋಪಿ ಎಂಬುದಾಗಿ ತಿಳಿದುಬಂದಿದೆ. ಈತ ಸೋಮವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಮಲಗಿದ್ದ 100 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.
ನಂತರ ವೃದ್ಧೆಯ ಕುಟುಂಬಸ್ಥರು ಈ ಕುರಿತು ಚಕ್ದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಾಗಿ ಪೊಲೀಸರು ಹುಡಕಾಟ ನಡೆಸುತ್ತಿದ್ದಾಗ ತಲೆಮರೆಸಿಕೊಂಡಿದ್ದ ಅಭಿಜೀತ್ನನ್ನು ಗಂಗಪ್ರಸಾದ್ಪುರ್ ಪ್ರದೇಶದಲ್ಲಿ ಸಂತ್ರಸ್ತ ವೃದ್ಧೆಯ ಕುಟುಂಬಸ್ಥರು ಮಂಗಳವಾರ ಬಂಧಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಂತ್ರಸ್ತ ವೃದ್ಧೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗಿತ್ತದೆ ಎಂದು ಚಕ್ದಾ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.