ಗೆಳೆಯನ ಜೊತೆ ಸುತ್ತಾಡಲು ಬಂದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಸಿದ 70ರ ಮುದಿಯ

ಭಾನುವಾರ, 6 ಜನವರಿ 2019 (07:43 IST)
ಗೋವಾ : 70 ವರ್ಷದ ವೃದ್ಧನೊಬ್ಬ ಮಹಿಳೆಯೊಬ್ಬಳ ಮಾನಭಂಗಕ್ಕೆ ಯತ್ನಸಿದ ಘಟನೆ ಗೋವಾದ ಗೌರವಾಡೊ ಪ್ರದೇಶದಲ್ಲಿ ನಡೆದಿದೆ.


ಗೋವಾದ ಗೌರವಾಡೊ ಪ್ರದೇಶದ ನಿವಾಸಿ ಆಯಗ್ನೆಲೊ ಎಂಬಾತ ಈ ಕೃತ್ಯ ಎಸಗಿದ ವೃದ್ಧ. ಮಹಿಳೆ ತನ್ನ ಸ್ನೇಹಿತನೊಂದಿಗೆ ಗೌರವಾಡೊ ಪ್ರದೇಶದಲ್ಲಿ ಸುತ್ತಾಡುತ್ತಿದ್ದರು. ಆಗ ಮಹಿಳೆ ಸ್ನೇಹಿತನಿಂದ ಸ್ವಲ್ಪ ದೂರ ಬಂದಾಗ ಅಲ್ಲೇ ಇದ್ದ ವೃದ್ಧ ಆಕೆಯ ಕೈ ಹಿಡಿದು ಎಳೆದು ತಬ್ಬಿಕೊಳ್ಳಲು ಮುಂದಾಗಿದ್ದಾನೆ.


ಆತನಿಂದ ಹೇಗೋ ತಪ್ಪಿಸಿಕೊಂಡ ಮಹಿಳೆ ತನ್ನ ಗೆಳೆಯನ ಬಳಿ ವಿಚಾರ ತಿಳಿಸದಾಗ ವಿಚಾರಿಸಲು ಬಂದ ಗೆಳೆಯನಿಗೆ ವೃದ್ಧ ಚಾಕು ತೋರಿಸಿ ಬೆದರಿಸಿದ್ದಾನೆ. ಬಳಿಕ ಮಹಿಳೆ ಹಾಗೂ ಆಕೆಯ ಗೆಳೆಯ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಆಧಾರದ ಮೇರೆಗೆ ಪೊಲೀಸರು ವೃದ್ಧನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ