ಬೀದಿ ನಾಯಿಗೆ ಹೊಡೆದಿದ್ದಕ್ಕೆ ಪೊಲೀಸ್ ಅರೆಸ್ಟ್
ಈ ಬೀದಿ ನಾಯಿ ಪೊಲೀಸ್ ಪೇದೆಯ ಕುಟುಂಬಸ್ಥರನ್ನು ನೋಡಿದರೆ ಸದಾ ಬೊಗಳುತ್ತಿತ್ತು. ಮೊನ್ನೆ ಇನ್ನೂ ಮಿತಿ ಮೀರಿ ಕಚ್ಚಿತ್ತು. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ನಾಯಿಗೆ ಬೇಸ್ ಬಾಲ್ ಸ್ಟಿಕ್ ನಿಂದ ಹೊಡೆದಿದ್ದಾರೆ. ಪರಿಣಾಮ, ನಾಯಿ ಸಾವನ್ನಪ್ಪಿದೆ.
ಈ ಬಗ್ಗೆ ಪೊಲೀಸ್ ಪೇದೆ ಮತ್ತು ನೆರೆಹೊರೆಯವರ ನಡುವೆ ವಾಗ್ವಾದವಾಗಿತ್ತು. ಈ ಬಗ್ಗೆ ಸ್ಥಳೀಯರೇ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸ್ ಪೇದೆಯನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.